ಸಿದ್ಧರಾಮೋತ್ಸವ ಅಲ್ಲ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ: ಎಚ್. ಎಮ್. ರೇವಣ್ಣ

ಸುದ್ದಿ360, ದಾವಣಗೆರೆ ಜು.11: ಸಿದ್ಧರಾಮೋತ್ಸವ ಅಲ್ಲ ಇದು ಸಿದ್ಧರಾಮಯ್ಯರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ. ಅವರ ಜೀವನದಲ್ಲಿನ ಒಂದು ಸಂಭ್ರಮದ ಸನ್ನಿವೇಶ ಇದಾಗಿದೆ ಎಂದು ಕುರುಬರ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಎಚ್. ಎಮ್. ರೇವಣ್ಣ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ಧರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಕಳಂಕರವಹಿತವಾಗಿ ಉತ್ತಮ ಜೀವನ ನಡೆಸುವುದರ ಜೊತೆಗೆ, ಕಷ್ಟ-ಸುಖಗಳನ್ನು ಅನುಭವಿಸಿ, ರಾಜ್ಯದಲ್ಲಿ ಬಲಿಷ್ಟ ನಾಯಕನಾಗಿ ಬೆಳೆದು, ಐದು ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ನೆಚ್ಚಿನ ನಾಯಕ 75 ವಸಂತಗಳನ್ನು ಕಳೆದಿರುವ ಈ ಸಂದರ್ಭದಲ್ಲಿ ಅಭಿಮಾನಿಗಳು ಎಲ್ಲರೂ ಸೇರಿ ಈ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದಾಗಿ ಅವರು ತಿಳಿಸಿದರು.

ಸಿದ್ಧರಾಮೋತ್ಸವ ಅನ್ನೋ ಪದ ಹೇಗೆ ಹುಟ್ಟಿಕೊಂಡಿದೆಯೋ ಗೊತ್ತಿಲ್ಲ. ಇದೇ ಸಂದರ್ಭದಲ್ಲಿ ಚುನಾವಣೆ ಹತ್ತಿರದಲ್ಲಿರುವುದು ಕಾಕತಾಳೀಯ ಅಷ್ಟೇ. ಇದು ಹೋರಾಟವಾಗಲಿ, ಶಕ್ತಿಪ್ರದರ್ಶನವಾಗಲಿ ಅಲ್ಲ ಎಂದು ಎಚ್. ಎಮ್. ರೇವಣ್ಣ ಹೇಳಿದರು.

Leave a Comment

error: Content is protected !!