ಸುದ್ದಿ360 ದಾವಣಗೆರೆ, ಸೆ.01: ಚನ್ನಗಿರಿ ತಾಲೂಕಿನ ಪುರಾತನ ಮಠ ಹಾಗೂ ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ತಾವರಕರೆ ಶ್ರೀಶಿಲಾಮಠದಲ್ಲಿ ಸೆ.5ಹಾಗೂ 6ರಂದು ಪರಮಪೂಜ್ಯ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರ 75ನೇ ಜನ್ಮವರ್ಧಂತಿ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಕಿರಿಯ ಪೂಜ್ಯರಾದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಮಾಹಿತಿ ನೀಡಿದರು.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ಸೆ. 5ರಂದು ಸಂಜೆ 5ಕ್ಕೆ ಬಾಳೇಹೊನ್ನೂರು ರಂಭಾಪುರಿಪೀಠದ ಶ್ರೀ ರಂಭಾಪುರಿ ವೀರಸಿಂಹಾಸನಾಧೀಶ್ವರ ಸ್ವಾಮೀಜಿ ಹಾಗೂ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಮಾಡಾಳ್ ಕೆ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ವಡ್ನಾಳ್ ರಾಜಣ್ಣ ಉದ್ಘಾಟನೆ ನರವೇರಿಸಲಿದ್ದಾರೆ. ಬಿಳಕಿ ಹಿರೇಮಠದ ರಾಜೋಟೇಶ್ವರ ಶಿವಾಚಾರ್ಯ ಶ್ರೀ ಹಾಗೂ ಮಹಾರಾಷ್ಟ್ರದ ರೇಣುಕಾ ಶಿವಾಚಾರ್ಯ ಶ್ರೀ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ವಿವಿಧ ಮಠಾಧೀಶರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅಡ್ಡಪಲ್ಲಕ್ಕಿ ಮಹೋತ್ಸವ
ಸೆ.6ರಂದು ಬೆಳಗ್ಗೆ 8ಕ್ಕೆ ವಾರಣಾಸಿಯ ಶ್ರೀ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಸೆ.6ರಂದು ಬೆಳಗ್ಗೆ 11ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ.
ಕಡೂರು ಯಳನಾಡು ಸಂಸ್ಥಾನ ಮಠ ಶ್ರೀ ಜ್ಞಾನ ಪ್ರಭು ಸಿದ್ದರಾಮ ಶ್ರೀ ಸಮ್ಮುಖದಲ್ಲಿ ಜರುಗುವ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅಮೃತಭವನ ಉದ್ಘಾಟನೆಯನ್ನು ಭೈರತಿ ಬಸವರಾಜ್, ಅಮೃತಸಭಾ ಭವನವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪರಿಗೆ ಸನ್ಮಾನ ಮಾಡಲಾಗುವುದು. ಸಂಸದ ಜಿ.ಎಂ ಸಿದ್ದೇಶ್ವರ ‘ಕೊಲ್ಲಿಪಾಕಿ ಕ್ಷೇತ್ರ ದರ್ಶನ’ ಪುಸ್ತಕ ಬಿಡುಗಡೆ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ‘ಉಮಾಮಹೇಶ್ವರ ಸಮುದಾಯದ ಭವನ’ ಉದ್ಘಾಟನೆ, ಸಂಸದ ಬಿ.ವೈ. ರಾಘವೇಂದ್ರ ‘ಅಮೃತಮಹೋತ್ಸವ ಕೊಠಡಿ’ಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ, ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಅರುಣ್ ಕುಮಾರ್, ಆಯನೂರು ಮಂಜುನಾಥ್, ಶಾಮನೂರು ಎಸ್. ಎಸ್. ಮಲ್ಲಿಕಾರ್ಜುನ್, ಡಿ.ಎಸ್. ಸುರೇಶ್, ಎಚ್.ಡಿ. ರಂಗನಾಥ್, ಬಿ.ಕೆ. ಸಂಗಮೇಶ್, ವಡ್ನಾಳ್ ರಾಜಣ್ಣ, ಡಿ.ಎಸ್. ಅರುಣ್ ಕುಮಾರ್, ಕೆ.ಇ. ಕಾಂತೇಶ್ ಭಾಗವಹಿಸಲಿದ್ದಾರೆ. ಇದೇ ವೇಳೆ ಗುರುರಕ್ಷೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವರಮನೆ ಶಿವಕುಮಾರ್, ಎ.ಎಸ್.ವೀರಣ್ಣ, ಮಾವಿನಹೊಳೆ ಪ್ರಕಾಶ್, ಕೆ.ಎಂ.ಗಿರೀಶ್, ಜವಳಿ ಮಂಜುನಾಥ್, ಜವಳಿ ಮಹೇಶ್ ಕೊಟ್ರೇಶ್ ಇದ್ದರು.