ಸುದ್ದಿ360 ದಾವಣಗೆರೆ ಆ.17: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಗೆ ನಗರದ ಜಿಎಂಐಟಿ ಕಾಲೇಜಿನ ಎರಡು ತಂಡಗಳು ಆಯ್ಕೆಯಾಗಿವೆ. ಇದೆ ಆಗಸ್ಟ್ 25 ಮತ್ತು 26 ರಂದು ಮಹಾರಾಷ್ಟ್ರದಲ್ಲಿ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ತಂಡಗಳು ಭಾಗವಹಿಸಲಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 12 ತಂಡಗಳು ಮೊದಲನೇ ಸುತ್ತಿನಲ್ಲಿ ಭಾಗವಹಿಸಿ ಕೊನೆಗೆ ಎರಡು ಅತ್ಯುತ್ತಮ ತಂಡಗಳು ಗ್ರಾಂಡ್ ಫಿನಾಲೆಗೆ ಆಯ್ಕೆಯಾದವು ಎಂದು ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರು ಮತ್ತು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸಂಯೋಜಕರಾದ ಶ್ರೀ ಮಾರುತಿ ಎಸ್ ಟಿ ತಿಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಒಂದು ತಂಡ ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಒಂದು ತಂಡ ಆಯ್ಕೆಯಾಗಿವೆ.
ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಆಯ್ಕೆಯಾದ ತಂಡದ ನಾಯಕನಾಗಿ ಸಾಗರ್ ಪಾಟೀಲ್ ಮತ್ತು ಸದಸ್ಯರುಗಳಾಗಿ ವರುಣ್ ಎಸ್ ಪಾಟೀಲ್, ಸುಮನ್ ದೇಸಾಯಿ, ತುಷಾರ್ ಬಿ ಆರ್, ಸಹನಾ ಎಸ್ ಬಿ ಮತ್ತು ಚಂದನ್ ಬಿ ಎಂದು ತಂಡದ ಮಾರ್ಗದರ್ಶಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ ಸಂಜಯ್ ಪಾಂಡೆ ಎಂ ಬಿ ಮತ್ತು ಪ್ರಾಧ್ಯಾಪಕರಾದ ಶ್ರೀ ಮುರುಗೇಶ್ ಜಂಬಗಿ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಿಂದ ಆಯ್ಕೆಯಾದ ತಂಡದ ನಾಯಕರಾಗಿ ವಿರುಪಾಕ್ಷ ಗುಪ್ತ ಎಚ್ ಎ ಮತ್ತು ಸದಸ್ಯರುಗಳಾಗಿ ಸುಚಿತ್ರ ಹಿರೇಗೌಡ, ಶಿವರಾಜ್ ಎಂ, ಸೈಯದ್ ಸಾಕಿಬ್ ಸುಹೇಲ್, ಪ್ರಜ್ವಲ್ ಹೆಚ್ ಸಿ, ರೇವಂತ್ ಜಿಬಿ ಎಂದು ತಂಡದ ಮಾರ್ಗದರ್ಶಕರಾದ ಶ್ರೀ ಕೀರ್ತಿಪ್ರಸಾದ್ ಜಿ ಮತ್ತು ರವಿತೇಜ ಬಾಳೆಕಾಯಿ ಎಂದು ತಿಳಿಸಿದ್ದಾರೆ.
ಇವರುಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳಾದ ವೈ ಯು ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ವಿವಿಧ ವಿಭಾಗಗಳ ಮುಖ್ಯಸ್ಥರು ಗಳು ಮತ್ತು ಪ್ರಾಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.