ಸುದ್ದಿ360 ದಾವಣಗೆರೆ.ಫೆ.28: ಇಲ್ಲಿನ ಕಬ್ಬೂರು ಬಸಪ್ಪನಗರದಲ್ಲಿ ಇಬ್ಬರ ನಡುವಿನ ಜಗಳ ಒಬ್ಬನ ಕೊಲೆಯಾಗುವ ಮೂಲಕ ಅಂತ್ಯ ಕಂಡಿದೆ. ಪ್ರಶಾಂತ (29) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಇವರ ನಡುವಿನ ಜಗಳಕ್ಕೆ ಹಳೇ ವೈಷಮ್ಯ ಕಾರಣ ಎನ್ನಲಾಗಿದೆ. ಜಗಳದ ವೇಳೆ ಕಟ್ಟಿಗೆಯಿಂದ ದಾಳಿ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಪ್ರಶಾಂತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಬ್ಬೂರು ಬಸಪ್ಪ ನಗರದ ಎಲವಟ್ಟಿ ರೈಸ್ ಮಿಲ್ ಬಳಿ ಪ್ರಶಾಂತ್ ಶವ ಪತ್ತೆಯಾಗಿದೆ. ಆರ್ ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.