ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಕ್ಷರ ಜಾತ್ರೆ – ಸಾಹಿತ್ಯಾಸಕ್ತರಿಗಾಗಿ ವಿಶೇಷ ರೈಲುಗಳು

ಸುದ್ದಿ360 ಹಾವೇರಿ ಜ.6: ಸರ್ವಜ್ಞನ ನಾಡಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಹಾವೇರಿ ನಗರ ಅಕ್ಷರಶಃ ಅಕ್ಷರ ಜಾತ್ರೆಯಲ್ಲಿ ನುಡಿ ತೇರನೆಳೆಯಲು ಸಿದ್ಧವಾಗಿದೆ.
ಸಾಹಿತ್ಯಾಸಕ್ತರು ಸಾಕಷ್ಟು ಮಂದಿ ಈಗಾಗಲೇ ನಗರದಲ್ಲಿ ಬೀಡುಬಿಟ್ಟಿದ್ದು, ನುಡಿ ಜಾತ್ರೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲಲು ಮನದುಂಬಿಕೊಳ್ಳಲು ಜನ ಸಾಗರ ಹಾವೇರಿಯತ್ತ ಹರಿದುಬರುತ್ತಲೇ ಇದೆ.
ಪ್ರತ್ಯೇಕ ಜಿಲ್ಲೆಯಾದ ನಂತರ ಹಾವೇರಿಯಲ್ಲಿ ಇದೇ ಮೊದಲ‌ಬಾರಿಗೆ ಅಖಿಲ ಭಾರತ‌ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು. ಸಾಮರಸ್ಯದ ಭಾವ – ಕನ್ನಡದ ಜೀವ ಈ ಬಾರಿಯ ಘೋಷ ವಾಕ್ಯವಾಗಿದೆ. ನುಡಿ ಜಾತ್ರೆಗೆ ಬರುತ್ತಿರುವ ಸಾಹಿತ್ಯಾಸಕ್ತರಿಗೆ ಜಿಲ್ಲಾಡಳಿತ ಯಾವುದೇ ಚ್ಯುತಿ ಬಾರದಂತೆ ಆತಿಥ್ಯ ನೀಡಲು ಟೊಂಕ ಕಟ್ಟಿ ನಿಂತಿದೆ.

ವಿಶೇಷ ರೈಲುಗಳ ವ್ಯವಸ್ಥೆ

ಸಾಹಿತ್ಯಾಸಕ್ತರಿಗಾಗಿ ಭಾರತೀಯ ರೈಲ್ವೆ ಇಲಾಖೆಯು ಹಾವೇರಿ-ಹುಬ್ಬಳ್ಳಿ ಮತ್ತು ಹಾವೇರಿ-ಹರಿಹರ ನಡುವೆ ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಕ್ರಮವಾಗಿ 07311 ರಿಂದ 07318 ರವರೆವರೆಗೆ 08 ವಿಶೇಷ ಡೆಮೋ ರೈಲುಗಳನ್ನು ಪ್ರತಿ ಗಂಟೆಗೆ ಒಂದರಂತೆ ಬೆಳಿಗ್ಗೆ 7.45ರಿಂದ ರಾತ್ರಿ 11.50 ರವರೆಗೆ ಓಡಿಸುತ್ತಿದೆ. ಮತ್ತು 16501, 16502,16505,16506,16507,16508,16 517 ಎಲ್ಲಾ ಸಂಖ್ಯೆಯ ವಿಶೇಷ 07 ಎಕ್ಸೆಸ್ ರೈಲುಗಳನ್ನು ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಹಾವೇರಿ-ಯಶವಂತಪುರ ನಡುವೆ ಓಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ Jevri a 20653, 20654, 22685, 22686, 22498, 16587, 14806 De ಸಂಖ್ಯೆ 07 ಎಕ್ಸೆಸ್ ನಾನ್ ಸ್ಟಾಪ್ ರೈಲುಗಳನ್ನು ಹಾವೇರಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನೀಲುಗಡೆಗೊಳಿಸಲಾಗಿದ್ದು, ಸಾಹಿತ್ಯಾಸಕ್ತರು ಇವುಗಳ ಸದುಪಯೋಗ ಪಡೆಯಬಹಿದಾಗಿದೆ.

admin

admin

Leave a Reply

Your email address will not be published. Required fields are marked *

error: Content is protected !!