ಹಿಟ್ ಅಂಡ್ ರನ್ – ಬೈಕ್‍ ಸವಾರ ಗಂಭೀರ

ಶಿವಮೊಗ್ಗ, ಜೂ.14: ನಗರದ ಬೈಪಾಸ್‍ ರಸ್ತೆಯ ಕಿಯಾ ಶೋ ರೂಂ ಎದುರಿನಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ತೀವ್ರಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕೆಂಪು ಬಣ್ಣದ ಐಟೆನ್ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಮುಂದೆ ಸಾಗಿದೆ. ಟ್ರಾಫಿಕ್ ಪೂರ್ವ ಪೊಲೀಸರು ಬೈಕ್ ಸವಾರನಿಗೆ ಆಸ್ಪತ್ರೆಗೆ ಸೇರಿಸಿ ಹಿಟ್ ಅಂಡ್ ರನ್ ಮಾಡಿದ ಕಾರು ಚಾಲಕನನ್ನು ಸಿಸಿ ಕ್ಯಾಮೇರ ದೃಶ್ಯಾವಳಿಗಳಿಂದ ಗುರುತಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Leave a Comment

error: Content is protected !!