ಅಗ್ನಿಪಥ ವಿರೋಧದ ಹಿಂದೆ ರಾಜಕೀಯ ಕೈವಾಡ: ಗೋವಿಂದ ಕಾರಜೋಳ

ಸುದ್ದಿ360 ಬಾಗಲಕೋಟೆ, ಜೂ.19: ಅಗ್ನಿಪಥ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ರಾಜಕೀಯ ಕೈವಾಡ ಇರುವುದು ಕಾಣಿಸುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಬಗ್ಗೆ ತನಿಖೆಯಾಗಲಿದೆ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗುತ್ತೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ನಿಪಥ ಯೋಜನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಡವಾಗಿ ಹೇಳಿವೆ. ಅಗ್ನಿಪಥ ಯೋಜನೆಯಿಂದ ಅನ್ಯಾಯವಾಗುವಂತಹ ಪ್ರಶ್ನೆಯೇ ಇಲ್ಲ. ಇದರಿಂದ ಅನುಕೂಲವಾಗಲಿದೆ. 10 ಪರ್ಸೆಂಟ್ ರಿಸರ್ವೇಶನ್ ಸಹ ಕೊಡೋದಾಗಿ ಹೇಳಿದ್ದಾರೆ. 4 ವರ್ಷ ಕರ್ತವ್ಯ ನಿರ್ವಹಿಸಿ ಬಂದರೂ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗಲಿದೆ. ಜನರು ಪ್ರತಿಭಟನೆ ಮಾಡುವುದನ್ನು ಕೈಬಿಡಬೇಕು. ತಮಗೆ

ಅಗ್ನಿಪಥ ಯೋಜನೆ ಕುರಿತು ಏನಾದರೂ ಆತಂಕಗಳಿದ್ದರೆ, ನ್ಯಾಯಯುತ ಬೇಡಿಕೆ ಇದ್ದರೆ ಶಾಂತ ರೀತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Leave a Comment

error: Content is protected !!