ದಾವಣಗೆರೆ: ಅಭಿವೃದ್ಧಿ – ಮತದಾನ ಕುರಿತು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು?

ದಾವಣಗೆರೆ, ಏ. 1: ಅಭಿವೃದ್ಧಿಯ ವಿಷಯ ಬಂದಾಗ ನೆನಪಾಗುವ ಮಲ್ಲಿಕಾರ್ಜುನ್, ಮತದಾನದ ಸಂದರ್ಭದಲ್ಲಿ ನೆನಪಾಗದಿರುವುದು ಬೇಸರದ ಸಂಗತಿ ಎಂದು ಎಸ್ ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ  ಡಾ. ಪ್ರಭಾ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸೇಂಟ್ ಜಾನ್ಸ್  ಶಾಲಾ ಆವರಣದಲ್ಲಿ 34ನೇ ವಾರ್ಡ್ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ ರವರು ಅಭಿವೃದ್ಧಿಯ ವಿಷಯ ಬಂದಾಗ ನೆನಪಾಗುವ ಮಲ್ಲಿಕಾರ್ಜುನ್, ಮತದಾನದ ಸಂದರ್ಭದಲ್ಲಿ ನೆನಪಾಗದಿರುವುದು ಮಾತ್ರ ಬೇಸರವಾಗುತ್ತದೆ ಎಂದರು.

ತಾವುಗಳು ಯಾವುದೇ ಗಾಳಿಸುದ್ದಿಗೆ ಕಿವಿ ಕೊಡಬಾರದು, ಮಲ್ಲಿಕಾರ್ಜುನ್ ರವರು ಕ್ಷೇತ್ರದ ಜನರ ಜೊತೆ ಸದಾ ಇರುತ್ತಾರೆ, ಕ್ಷೇತ್ರದ ಅಭಿವೃದ್ಧಿಯೇ ಅವರ ಮೂಲ ಉದ್ದೇಶವಾಗಿದ್ದು, ನೀವು ಮತ್ತೆ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ನಿಂತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಬೆಂಬಲವಾಗಿರಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಶಾಮನೂರು ಟಿ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್. ಎಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ತುರ್ಚ್ಘಟ್ಟದ ಬಸವರಾಜಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಭಾಯಿ ಮಾಲತೇಶ್ ಮಾತನಾಡಿದರು, ಗಡಿಗುಡಾಳ್ ಮಂಜುನಾಥ್, ಆರ್ ಎಚ್ ನಾಗಭೂಷಣ್, ನೀಲಕಂಠಪ್ಪ, ಲಕ್ಷ್ಮೀದೇವಿ, ವೆಂಕಟೇಶ್ ನಾಯ್ಕ್, ಶಿವಣ್ಣ, ರಾಜೇಶ್ವರಿ, ಮಂಗಳಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!