ಅಮೋಘ ಕೆ.ಆರ್.ಗೆ ಡಾಕ್ಟರೇಟ್

ಸುದ್ದಿ360 ಶಿವಮೊಗ್ಗ ಜು.28: ನಗರದ ಕುವೆಂಪು ರಸ್ತೆಯ ನಿವಾಸಿಯಾದ ಅಮೋಘ ಕೆ.ಆರ್. ಇವರು ರಾಜ್ಯದ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಮಂಗಳೂರಿನ ಸರ್ಕಾರಿ ಮೀನುಗಾರಿಕೆ ಕಾಲೇಜಿನಲ್ಲಿ 2018-19 ರಿಂದ 2020-21ರ ವರೆಗೆ ವಿದ್ಯಾಭ್ಯಾಸ ಮಾಡಿ ಪಿಹೆಚ್.ಡಿ ಪದವಿ ಪಡೆದಿರುತ್ತಾರೆ, ಮೀನುಗಾರಿಕಾ ಅಕ್ವಾಕಲ್ಚರ್ ವಿಭಾಗದಲ್ಲಿ ಡಾ. ಗಣಪತಿ ನಾಯಕ್ ಇವರ ಮಾರ್ಗದರ್ಶನದಲ್ಲಿ ರೆಗ್ಯುಲರ್ ವಿಭಾಗ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

ಡಾ. ಅಮೋಘ ಕೆ.ಆರ್. ಇವರು ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕರಾದ ಶ್ರೀ ಕೆ.ಆರ್. ರಾಜು ಮತ್ತು ಶ್ರೀಮತಿ ವಸಂತಕುಮಾರಿ ಇವರ ಪುತ್ರರಾಗಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!