ಅಶೋಕ ಲಾಂಛನವನ್ನೊಮ್ಮೆ ಮ್ಯೂಸಿಯಂನಲ್ಲಿ ನೋಡಲಿ – ಆರೋಪಗಳು ಯಾರನ್ನೂ ಬಿಟ್ಟಿಲ್ಲ : ಜಗ್ಗೇಶ್

ಆರಾಧಿಸುವವರು 98% ಇದ್ರೆ, ವಿರೋಧಿಸುವವರು 2% ಏನ್ ಮಾಡೋಕಾಗುತ್ತೆ. . .

ಸುದ್ದಿ360 ತುಮಕೂರು ಜು.13: ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಅವರು, ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ ಲಾಂಛನದ ಬಾಯಿ‌ ಮುಚ್ಚಿತ್ತು. ಈಗ‌ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೇ ಘರ್ಜನೆ ಮಾಡುತ್ತಿದೆ.

ಆರೋಪಗಳು ಶಿವ, ಬ್ರಹ್ಮ ಕೃಷ್ಣನನ್ನೇ ಬಿಟ್ಟಿಲ್ಲ. ಶಮಂತಕ ಮಣಿ‌ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು, ಅಂತದ್ದರಲ್ಲಿ ಮೋದಿಯನ್ನು ಬಿಡ್ತಾರಾ  ಎಂದು ಪ್ರಶ್ನಿಸಿದ ರಾಜ್ಯಸಭಾ ಸದಸ್ಯ ಜಗ್ಗೇಶ್, ಈ ರಾಷ್ಟ್ರದ ಜನ‌ ಎದ್ದೆಯುಬ್ಬಿಸಿ ಹೇಳಬೇಕಾದದ್ದು ಒಳ್ಳೇ ಧೀಮಂತ ನಾಯಕ ಸಿಕ್ಕಿದ್ದಾನೆ ಎಂದು. ಮೋದಿಯನ್ನು ಆರಾಧಿಸುವವರ ಸಂಖ್ಯೆ 98% ಇದೆ. ವಿರೋಧಿಸುವವರ ಸಂಖ್ಯೆ 2% ಇದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದಿದ್ದಾರೆ.

ಗುರುಪೂರ್ಣಿಮೆಯಂದು ಗುರುಗಳ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ಖುಷಿ ಅನಿಸಿದೆ. ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದು ಜಗ್ಗೇಶ್ ಹೇಳಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!