ಆ.6: ಕಲಾಕುಂಚ ಕೇರಳ ಶಾಖೆಯಿಂದ ‘ವನಸುಮ’ , ‘ಕಾವ್ಯ ಮೃಷ್ಟಾನ್ನ’ ಕವನ ಸಂಕಲನ ಲೋಕಾರ್ಪಣೆ

ಸುದ್ದಿ360 ದಾವಣಗೆರೆ, ಆ.4: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳ ಶಾಖೆಯ ಆಶ್ರಯದಲ್ಲಿ ಆಗಸ್ಟ್ 6 ರಂದು ಸಂಜೆ 5 ಗಂಟೆಗೆ ಕೇರಳ ಜಿಲ್ಲೆಯ, ಕಾಸರಗೋಡು ಜಿಲ್ಲೆಯ ಉಪ್ಪಳದ ಶ್ರೀಕ್ಷೇತ್ರ ಕೊಂಡವೂಡಿನಲ್ಲಿ ಕವಯತ್ರಿ ಲಕ್ಷ್ಮೀದೇವಿ ವಿ.ಭಟ್‌ ವಿರಚಿತ “ವನಸುಮ” ಹಾಗೂ “ಕಾವ್ಯ ಮೃಷ್ಟಾನ್ನ” ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಗೀತಾಭಿಯಾನದ ಉದ್ಘಾಟನೆ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕೊಂಡವೂರಿನ ಶ್ರೀಮಠದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ಮಾಡಲಿದ್ದಾರೆ. ಉರ್ವದ ಕೆನರಾ ಪ್ರೌಢಶಾಲೆಯ ಅಧ್ಯಾಪಕರಾದ ಲಕ್ಷ್ಮೀದೇವಿ ವಿ.ಭಟ್ ಆಶಯ ನುಡಿಗಳನ್ನು ಆಡಲಿದ್ದಾರೆ. ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರೂ ಕವಿಗಳಾದ ಯೋಗೀಶ್‌ರಾವ್ ಚಿಗುರುಪಾದ ಕವನ ಸಂಕಲನ ಕುರಿತು ಪ್ರಾಸ್ತಾವನೆಯಾಗಿ ಮಾತನಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞರೂ, ಕಲಾಕುಂಚ ಕೇರಳ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವ ಕುಂಬ್ಳೆ ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಾಹಿತಿಗಳಾದ ಡಾ. ಕೊಳಚಪ್ಪೆ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಲಾಕುಂಚ ಕೇರಳ ಶಾಖೆಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಪಡ್ರೆ ತಿಳಿಸಿದ್ದಾರೆ.

ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮೀ ಕಾರಂತ್, ಮಂಗಳೂರಿನ ಕ್ಯಾಂಪ್ಕೋ ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ  ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಪರ್ಮುಖ ಮುಂತಾದವರು ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿರುತ್ತಾರೆ.

ದಿವಾಕರ ಬಲ್ಲಾಳ್, ಪ್ರಸನ್ನ ಸಿ.ಎನ್.ಭಟ್ ಕಾರುಂಜೆ, ದಿವ್ಯ ಚಂದನ್ ಕಾರಂತ್, ರಾಧಾಮಣಿ ಆರ್.ರಾವ್ ಮುಂತಾದವರು ಭಾವಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಿದ್ಯಾವರ್ಧಕ ಪ್ರೌಢಶಾಲೆಯ ಕನ್ನಡ ಶಿಕ್ಷಕರು, ಕಲಾಕುಂಚದ ಗೌರವ ಉಪಾಧ್ಯಕ್ಷರಾದ ರಾಜಾರಾಮ್‌ರಾವ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸುವಂತೆ ಕಲಾಕುಂಚ ಕೇರಳ ಶಾಖೆಯ ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!