ಆಧ್ಯಾತ್ಮದೆಡೆ ಸಾಗಲು ಯೋಗವೇ ಮಾರ್ಗ: ಡಾ. ವಿದ್ಯಾ ಹಿರೇಮಠ

ನೋಬೆಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಪ್ರಶಸ್ತಿ ಪ್ರದಾನ ಸಮಾರಂಭ

ಸುದ್ದಿ360 ದಾವಣಗೆರೆ, ಸೆ.10: ವ್ಯಕ್ತಿಯು ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇಮವನ್ನು ಪಡೆಯಲು ಯೋಗಾಭ್ಯಾಸ ಸೂಕ್ತ ಸಾಧನವಾಗಿದೆ ಎಂದು ಮಂಗಳೂರಿನ ಯೆನಾಪೋಯಾ ಪ್ರಕೃತಿ ಚಿಕಿತ್ಸಾ ಯೋಗ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಹಿರೇಮಠ ಅಭಿಪ್ರಾಯಪಟ್ಟರು.

ನಗರದ ಅರುಣ ಚಿತ್ರಮಂದಿರ ಬಳಿ ಇರುವ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸಮುದಾಯ ಭವನದಲ್ಲಿ ಶನಿವಾರ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ ಹಮ್ಮಿಕೊಂಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಾವು ನಮ್ಮೊಳಗೇ ಇರುವ ಆತ್ಮದ ಆನಂದವನ್ನು ಮರೆತು, ಹೊರಗಡೆ ಸಂತೋಷಕ್ಕಾಗಿ ಹುಡುಕಾಡುತ್ತಿದ್ದೇವೆ. ಮನುಷ್ಯ ಕಾಲವಾದ ನಂತರ ಆತನ ದೇಹ, ಆಸ್ತಿ, ಹೆಸರು, ಕೀರ್ತಿ, ಪ್ರತಿಷ್ಠೆ, ಬಂಧು-ಬಾಂಧವರು, ಸ್ನೇಹಿತರು ಯಾರೂ ಆತನೊಂದಿಗೆ ಹೋಗುವುದಿಲ್ಲ. ಆದರೆ ಆತ್ಮ ಮಾತ್ರ ಸಾವಿನಲ್ಲೂ ನಮ್ಮ ಜತೆ ಇರುವಂತದ್ದಾಗಿದೆ ಎಂದು ಹೇಳಿದರು.

ನಮ್ಮ ಜೀವನದ ಎಲ್ಲ ಕರ್ಮಗಳನ್ನು ಕಳೆದು ಆಧ್ಯಾತ್ಮದೆಡೆಗೆ ಕರೆದೊದೊಯ್ಯುವ ಏಕೈಕ ಮಾರ್ಗ ಯೋಗಾಭ್ಯಾಸವಾಗಿದೆ. ಅಲ್ಲದೆ ಆರೋಗ್ಯ ರಕ್ಷಣೆ ಸೇರಿ ನಮಗೆ ಎಲ್ಲ ವಿಧದಲ್ಲೂ ಸಹಕಾರಿಯಾಗಿರುವ ಯೋಗಾಭ್ಯಾಸಕ್ಕೆ ಆದ್ಯತೆ ನೀಡಬೇಕು.

ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಮಾತನಾಡಿದರು. ಇತ್ತೀಚೆಗೆ ನೇಪಾಳದಲ್ಲಿ ನಡೆದ ಇಂಡೊ-ನೇಪಾಳ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಜಯಗಳಿಸಿ ಪದಕ ಪಡೆದ ನಾಲ್ವರು ಯೋಗ ಪಟುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಕೆ. ಜೈಮುನಿ, ಪ್ರಧಾನ ಕಾರ್ಯದರ್ಶಿ ಡಾ.ಡಿ. ಫ್ರಾನ್ಸಿಸ್ ಕ್ಸೇವಿಯರ್, ಅಂತಾರಾಷ್ಟ್ರೀಯ ಯೋಗಪಟು ಡಾ.ಎನ್. ಪರಶುರಾಮ್, ಅನಿಲ್ ರಾಣಿಬೆನ್ನೂರು ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!