ಆ.11ಕ್ಕೆ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ, ಆ. 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ 11ರ ಬೆಳಗ್ಗೆ 10ಕ್ಕೆ ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ತಿರಂಗದೊಂದಿಗೆ ಹೊರಡುವ ರ್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಅಮರ್ ಜವಾನ್ ವೃತ್ತದಲ್ಲಿ ಬೈಕ್ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.

ಬೈಕ್ ರ್ಯಾಲಿ ಮಾರ್ಗ: ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಪ್ರಾರಂಭಗೊಳ್ಳುವ ರ್ಯಾಲಿಯು ಬಂಬೂಬಜಾರ್, ಎಪಿಎಂಸಿ ಫ್ಲೈ ಓವರ್, ಹೊಸ ಬಸ್ ನಿಲ್ದಾಣ, ಗಾಂಧಿವೃತ್ತ, ರೈಲ್ವೆ ನಿಲ್ದಾಣ, ಎವಿಕೆ ರಸ್ತೆ, ವಾಸನ್ ಐ ಕೇರ್ ಮಾರ್ಗವಾಗಿ ಗುಂಡಿವೃತ್ತ, ಡೆಂಟಲ್‌ಕಾಲೇಜು ವೃತ್ತದಲ್ಲಿ ಸಂಚರಿಸಿ ವಿದ್ಯಾನಗರ ಕಾಫಿ ಬಾರ್ ರಸ್ತೆ ಮೂಲಕ ನೂತನ್ ಕಾಲೇಜ್, ಬಿಐಇಟಿ ರಸ್ತೆ, ಲಕ್ಷ್ಮೀ ಫ್ಲೋರ್ ಮಿಲ್ ರಸ್ತೆ, ನಂತರ ರಿಂಗ್ ರಸ್ತೆ ಮಾರ್ಗವಾಗಿ ಅಮರ್ ಜವಾನ್ ಸ್ಮಾರಕದಲ್ಲಿ ಅಂತ್ಯಗೊಳ್ಳಲಿದೆ.

ಜಿಲ್ಲೆಯಲ್ಲಿ ಕನಿಷ್ಠ 2 ಲಕ್ಷ ಬಾವುಟ ಹಾರಿಸುವ ಗುರಿ

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ಮಾತನಾಡಿ, 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಮಹತ್ವ ಸಾರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ 2 ಲಕ್ಷ ಬಾವುಟ ಹಾರಿಸುವ ಗುರಿ ಹೊಂದಲಾಗಿದೆ. ಜಿಲ್ಲಾ ಬಿಜೆಪಿ ವತಿಯಿಂದ ಶಾಸಕರ ಮುಂದಾಳತ್ವದಲ್ಲಿ ಈಗಾಗಲೇ ಬಾವುಟ ನೀಡಲಾಗಿದೆ ಎಂದು ಹೇಳಿದರು.

ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್

ಬಿಜೆಪಿಯಿಂದ ಆ.14ರ ಸಂಜೆ 5ಕ್ಕೆ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆ ಮಾಡಲಾಗುವುದು. ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದ್ದು, ದೇಶ ವಿಭಜನೆಯಾಗಿದ್ದನ್ನು ఖంಡಿసి ಮೌನ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯು ಬಿಜೆಪಿ ಕಚೇರಿಯಿಂದ ಗಾಂಧಿವೃತ್ತದ ಮಾರ್ಗವಾಗಿ ಸಾಗಿ ನಂತರ ಜಯದೇವವೃತ್ತದಲ್ಲಿ ಸಮಾಪ್ತಿ ಗೊಳ್ಳಲಿದೆ ಎಂದರು.

ಆ.15 ಕ್ಕೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಆಚರಣೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಅಮೃತಮಹೋತ್ಸವ ಯಶಸ್ವಿಯಾಗಿ ನಿರ್ವಹಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್.ಟಿ.ವೀರೇಶ್‌, ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಕ, ಡಿ.ಎಸ್‌. ಶಿವಶಂಕರ್, ರಾಜು ನೀಲಗುಂದ, ಹೆಚ್.ಪಿ.ವಿಶ್ವಾಸ್, ಶಿವಪ್ರಕಾಶ್, ಯಲ್ಲೇಶ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!