ಸುದ್ದಿ360 ದಾವಣಗೆರೆ, ಆ.19: ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣ ಸೇವೆ ಸಲ್ಲಿಸುತ್ತಾ ಬಂದಿರುವ ಖ್ಯಾತಿಯನ್ನು ಹೊಂದಿರುವ ಸಂತ ಪೌಲರ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಆ.20, 21ರಂದು ನಡೆಯಲಿರುವುದಾಗಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಚರ್ಚ್ ರಸ್ತೆಯಲ್ಲಿರುವ ಸಂತ ಪೌಲರ ಶಾಲೆ ಆವರಣದಲ್ಲಿ ಆ.21ರಂದು ಸಂಜೆ 5 ಗಂಟೆಗೆ ನಡೆಯುವ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸುಪೀರಿಯರ್ ಜನರಲ್ ಡಾ. ಸಿಸ್ಟರ್ ಕ್ರಿಸ್ ಅಧ್ಯಕ್ಷತೆ ವಹಿಸುವರು ಎಂದರು.
ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿ ನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ ಸಿಇಒ ಡಾ.ಎ. ಚೆನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಡಿಡಿಪಿಯು ಎನ್. ಶಿವರಾಜ್, ಡಿಡಿಪಿಐ ತಿಪ್ಪೇಶಪ್ಪ, ಡಾ. ಎಸ್.ಜೆ. ಫ್ರಾನ್ಸಿಸ್ ಸೆರಾವೊ, ಪ್ರಾಂತ್ಯಾಕಾರಿ ಸಿಸ್ಟರ್ ಬರ್ನೀಸ್ ತೆರೇಸ್, ಸಿಸ್ಟರ್ ಜೋಸ್ ಲಿನೆಟ್, ಸಿಸ್ಟರ್ ಅಲ್ಬಿನಾ, ಪಾಲ್ಗೊಳ್ಳುವರು ಎಂದು ತಿಳಿಸಿದರು.
ಆ.20ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ, ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಾಂತ್ಯಾಧಿಕಾರಿ ಸಿಸ್ಟರ್ ಬರ್ನೀಸ್ ತೆರೇಸ್ ಅಧ್ಯಕ್ಷತೆ ವಹಿಸುವರು. ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿನಿ ಏಂಜಲ್ ಮೇರಿ ಜೋಸೆಫ್, ಸೆಂಟ್ರಲ್ ಶಾಲೆ ಸಿಸ್ಟರ್ ಸಮಂತ, ಸಿಸ್ಟರ್ ಡಾ. ಕ್ರಿಸ್, ಸಿಸ್ಟರ್ ಜೋಸ್ ಲಿನೆಟ್, ಸಿಸ್ಟರ್ ಅಲ್ಬಿನಾ, ಸಿಸ್ಟರ್ ಮಾರ್ಜರಿ, ಸಿಸ್ಟರ್ ಆನಿಸ್, ಸಿಸ್ಟರ್ ಬರ್ನಿ, ದಿನೇಶ್ ಕೆ. ಶೆಟ್ಟಿ, ಬಿ.ಪಿ. ಹರೀಶ್ ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಎಸ್. ನಂದಿ, ಡಾ. ಶುಕ್ಲಾ ಶೆಟ್ಟಿ, ಡಾ. ಭಾಗ್ಯವತಿ, ಡಾ.ಜಿ.ಎಸ್. ಲತಾ, ಡಾ.ಬಿ.ಎಸ್. ಪ್ರಸಾದ್, ಡಾ.ಐ.ವಿ. ರುದ್ರಪ್ರಸಾದ್, ಡಾ. ಪ್ರಭು ಬಸವನಗೌಡ, ಡಾ. ದೀಪಕ್ ಬೊಂದಾಡೆ, ಮುರುಘರಾಜೇಂದ್ರ ಚಿಗಟೇರಿ, ಎ. ಶೀಲಾ ಭಾಗವಹಿಸುವರು ಎಂದರು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಮಾತನಾಡಿ, 1946ರಲ್ಲಿ ಸ್ಥಾಪನೆಯಾದ ಸಂಸ್ಥೆ, ಜಿಲ್ಲೆಯಲ್ಲಿ ಅವಿರತವಾಗಿ ಅಕ್ಷರ ಸೇವೆ ನಡೆಸುತ್ತಾ ಬಂದಿದೆ. ಸಂಸ್ಥೆಯಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಸರಕಾರದ ಮಟ್ಟದಲ್ಲಿ ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಿನಿಮಾ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯತೆ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅಂತಹ 8 ಹಿರಿಯ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎಚ್.ಸಿ ಜಯಮ್ಮ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಬರ್ನಿ, ಹಿರಿಯ ಶಿಕ್ಷಕಿಯರಾದ ಮಂಜುಳಾ, ಜೆಸ್ಸಿ, ಅನುರಾಧಾ ಇದ್ದರು.