ಇಂದು ಮತ್ತು ನಾಳೆ ಜೆ.ಪಿ. ನಡ್ಡಾ, ಬಿಜೆಪಿ ನಾಯಕರ ದಾವಣಗೆರೆ ವಿಭಾಗ ಪ್ರವಾಸ

ಸುದ್ದಿ360 ದಾವಣಗೆರೆ ಜ.5: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಶಿ ಹಾಗೂ ರಾಜ್ಯಸಭಾ  ಸದಸ್ಯ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜ.5 ಮತ್ತು 6ರಂದು ಎರಡು ದಿನಗಳ ಕಾಲ ದಾವಣಗೆರೆ ವಿಭಾಗದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಮಧುಗಿರಿ ವಿಭಾಗಗಳಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ತಂಡ ಪಕ್ಷ ಸಂಘಟನೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದೆ.

ಜ.5ರಂದು ಚಿತ್ರದುರ್ಗದಲ್ಲಿ ಬಿಜೆಪಿ ಒಬಿಸಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ನಂತರ ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆಯಲಿದ್ದಾರೆ.

ಅದ್ದೂರಿ ಸ್ವಾಗತ

ಜಿಲ್ಲೆಗೆ ಇದೇ ಪ್ರಥಮ ಬಾರಿಗೆ ಆಗಮಿಸುತ್ತಿರುವ ಜೆಪಿ ನಡ್ಡಾ ಅವರು ಜ.5ರ ಸಂಜೆ 6ಕ್ಕೆ ದಾವಣಗೆರೆ ಪ್ರವೇಶಿಸಲಿದ್ದಾರೆ. ಸಂಜೆ 5ರ ಸುಮಾರಿಗೆ ಹೆಬ್ಬಾಳು ಟೋಲ್ ಗೇಟ್‍ ಬಳಿ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ನೂರಾರು ಕಾರುಗಳೊಂದಿಗೆ ಹೋಗಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ನಂತರ ಜಿಎಂಐಟಿ ಅತಿಥಿಗೃಹದಲ್ಲಿ ಪಕ್ಷದ ಮುಖಂಡರ ಜತೆಗೆ ಸಭೆ ನಡೆಯಲಿದೆ ಎಂದು ವೀರೇಶ್ ಹನಗವಾಡಿ ತಿಳಿಸಿದರು.

ಜ. 6ರಂದು ಬೆಳಿಗ್ಗೆ 9ಕ್ಕೆ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ನಂತರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಹಾಗೂ ವಾಲ್ಮೀಕಿ ನಾಯಕ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಇವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.

ಜ.6ರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 10ರ ಬೂತ್ ಸಂಖ್ಯೆ 55ರ  ಹೊಂಡದ ಸರ್ಕಲ್ ದಾವಲ್ ಪೇಟೆ ಬೂತ್ನ ಸ್ವಕುಳಸಾಳಿ ಕಲ್ಯಾಣಮಂಟಪದಲ್ಲಿ ಬೂತ್ ಸಮಿತಿ ಹಾಗೂ ಪೇಜ್ ಪ್ರಮುಖರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ವಾಟ್ಸ್ಆಪ್ ‍ಗ್ರೂಪ್‍ಗೆ ಚಾಲನೆ ನೀಡುವರು ಮತ್ತು ಪಕ್ಷದ ಬಾವುಟವನ್ನು ನಡ್ಡಾ ಅವರು ಸ್ವತಃ ಕಟ್ಟಲಿದ್ದಾರೆ.

11.30ಕ್ಕೆ ನಗರದ ತ್ರಿಶೂಲ್ ಕಲಾಭವನದಲ್ಲಿ ವೃತ್ತಿಪರರು ಹಾಗೂ ಪ್ರಭಾವಿ ಮತದಾರರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಜಿಲ್ಲಾ ಉಪಾಧ್ಯಕ್ಷರಾದ ಮಂಜಾನಾಯ್ಕ,  ಶಿವರಾಜ ಪಾಟೀಲ್, ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಸೊಕ್ಕೆ, ದಾವಣಗೆರೆ ಉತ್ತರ ಅಧ್ಯಕ್ಷ ಸಂಗನಗೌಡ್ರು, ದಕ್ಷಿಣ ಅಧ್ಯಕ್ಷ ಾನಂದರಾವ್ ಶಿಂಧೆ ಹಾಗೂ ಮಾಧ್ಯಮ ಪ್ರಮುಖ್ ಎಚ್.ಪಿ. ವಿಶ್ವಾಸ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!