ಇದೀಗ ಪ್ರತಿ ಕನ್ನಡಿಗರಿಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ  ಸದಸ್ಯರಾಗುವ ಅವಕಾಶ

ಸುದ್ದಿ360 ದಾವಣಗೆರೆ, ಆ.22: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯತ್ವ ಪಡೆಯಲು, ರೂಪಾಯಿ 250-00 ಆನ್ಲೈನ್ ಮೂಲಕವೇ  ಪಾವತಿಸಿ ಸದಸ್ಯತ್ವ ಪಡೆಯುವ ಸದಾವಕಾಶವನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ಕನ್ನಡಿಗರಿಗೂ ಕಲ್ಪಿಸಿ ಕೊಟ್ಟಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ ವಾಮದೇವಪ್ಪ ಅವರು  ತಮ್ಮ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದಲೂ, ವಿಶ್ವದಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಸ್ತುತ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸಹ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ರೂ.500-00 ಗಳಿದ್ದ ಸದಸ್ಯತ್ವ ಶುಲ್ಕವನ್ನು ರೂ. 250-00 ಗಳಿಗೆ ಇಳಿಸಲಾಗಿದೆ. ಜೊತೆಗೆ ಸಾಧಾರಣ ಗುರುತಿನ ಚೀಟಿ ನೀಡಲಾಗುತ್ತಿದ್ದನ್ನು ಬದಲಾಯಿಸಿ, ರೂ. 150-00 ಗಳಿಗೆ ಅತ್ಯಾಧುನಿಕ ತಂತ್ರಾಂಶದ ಚಿಪ್ ವುಳ್ಳ ಸ್ಮಾರ್ಟ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಹೊಸದಾಗಿ ನೋಂದಾಯಿಸುವ ಸದಸ್ಯರಿಗೆ ವಿತರಿಸಲಾಗುತ್ತಿದೆ. ಈ ಹಿಂದೆ ಸದಸ್ಯತ್ವ ಪಡೆದವರು ಸಹ ರೂ 150-00 ಗಳನ್ನು ಪಾವತಿಸಿ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಇದುವರೆಗೆ ಪರಿಷತ್ತಿನ ಕಚೇರಿಗೆ ಬರಬೇಕಿದ್ದ ಕನ್ನಡಿಗರು, ಇನ್ನುಮುಂದೆ ಮನೆಯಲ್ಲಿಯೇ ಕುಳಿತು, ಸುಲಭವಾಗಿ ಆನ್ಲೈನ್ ಮೂಲಕ ಸದಸ್ಯತ್ವವನ್ನು ಪಡೆಯಲು ಸರಳವಾದ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಇದೀಗ ಸಿದ್ಧಪಡಿಸಿ, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ  ಹಸ್ತದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ ಮಹೇಶ್ ಜೋಶಿಯವರ ನೇತೃತ್ವದಲ್ಲಿ   ಲೋಕಾರ್ಪಣೆಗೊಳಿಸಲಾಗಿದೆ ಎಂದು ವಾಮದೇವಪ್ಪ ತಿಳಿಸಿದ್ದಾರೆ.

ಈ ಆ್ಯಪ್ ಅನ್ನು ತಮ್ಮ ಮೊಬೈಲಿನಲ್ಲಿ ಅನುಸ್ಥಾಪಿಸಲು https://play.google.com/store/apps/details?id=com.knobly.kasapa  ಈ ಕೊಂಡಿಯನ್ನು ಒತ್ತಿ.

ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು https://kannadasahithyaparishattu.in/app ಈ ಲಿಂಕ್ ಬಳಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ

 ದಾವಣಗೆರೆ ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಬಿ.ವಾಮದೇವಪ್ಪ ಮತ್ತು ತಮ್ಮ ತಮ್ಮ ತಾಲ್ಲೂಕು ಕ ಸಾ ಪ ಘಟಕದ ಅಧ್ಯಕ್ಷರುಗಳ ಮೂಲಕ   ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದೆ.

admin

admin

Leave a Reply

Your email address will not be published. Required fields are marked *

error: Content is protected !!