ಇ-ಬೈಕ್ – ಶೋರೂಮ್  ಉದ್ಘಾಟನೆ (ಜೂ.24) – ವಾಹನ ಬುಕಿಂಗ್‍ ಆರಂಭ

ಸೇಲ್ಸ್‌, ಸರ್ವಿಸ್, ಸ್ಪೇರ್ಸ್‌ ಮತ್ತು ಸೇಫ್ಟಿ (4 ಎಸ್‍) ಮಳಿಗೆ

ಸುದ್ದಿ360 ದಾವಣಗೆರೆ, ಜೂ.23: ಆ್ಯಂಪೈರ್ ಎಲೆಕ್ಟ್ರಿಕ್‍ ದ್ವಿಚಕ್ರ ವಾಹನಗಳ ಅನುಶರಣ್ ಆ್ಯಂಪೈರ್ ಶೋರೂಮ್ ಜೂ.24ರಂದು ನಗರದ ಪಿಬಿ ರಸ್ತೆಯ ಪೂಜಾ ಹೋಟೆಲ್ ಸಮೀಪ ಉದ್ಘಾಟನೆಗೊಳ್ಳಲಿದೆ ಎಂದು ಬ್ರಾಂಚ್ ಮುಖ್ಯಸ್ಥ ಅಣ್ಣಾರಾವ್ ಕುಲಕರ್ಣಿ ಮಾಹಿತಿ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.24ರಂದು ಸಂಜೆ ೫ ಗಂಟೆಗೆ ಆ್ಯಂಪೈರ್ ಸಂಸ್ಥೆಯ ಸೇಲ್ಸ್ ಹೆಡ್ ಎಸ್. ಪ್ರಣೇಶ್ ನೂತನ ಶೋರೂಮ್ ಉದ್ಘಾಟಿಸುವರು. ರಾಜ್ಯದ ಸೇಲ್ಸ್ ಹೆಡ್ ಎ.ಎನ್. ಪ್ರೀತಮ್ ಕುಮಾರ್, ಸರ್ವಿಸ್ ಮ್ಯಾನೇಜರ್ ಟಿ. ಸಿವ ಹಾಗೂ ಅನುಶರಣ್ ಸಿಬ್ಬಂದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ನಗರದಲ್ಲಿ ಆರಂಭವಾಗಲಿರುವ ಅನುಶರಣ್ ಆ್ಯಂಪೈರ್, ಒಂದು ಎಕ್ಸ್‌ಕ್ಲೂಸಿವ್ 4ಎಸ್ (ಸೇಲ್ಸ್‌, ಸರ್ವಿಸ್, ಸ್ಪೇರ್ಸ್‌ ಮತ್ತು ಸೇಫ್ಟಿ) ಮಳಿಗೆಯಾಗಿದೆ. ವಿದ್ಯುತ್‍ ಚಾಲಿತ ದ್ವಿಚಕ್ರ ವಾಹನಗಳ ಖರೀದಿಸಲು ಅನುಕೂಲವಾಗುವಂತೆ ಹಣಕಾಸು ಸಂಸ್ಘೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬ್ಯಾಟರಿಗೆ ಮೂರು ವರ್ಷಗಳ ಗ್ಯಾರಂಟಿ ಇರುವುದಾಗಿ ಅವರು ಮಾಹಿತಿ ನೀಡಿದರು.

ನೂತನ ಮಳಿಗೆಯಲ್ಲಿ ಪ್ರಸ್ತುತ ಆ್ಯಂಪೈರ್ ಬ್ಯಾಂಡ್‌ನ ರಿವೋಲ್ಟ್ ಬೈಕ್ ಹಾಗೂ ಮ್ಯಾಗ್ನಸ್ ಇಎಕ್ಸ್ ಸ್ಕೂಟರ್‌ಗಳು ಶೋರೂಮ್‌ನಲ್ಲಿ ಲಭ್ಯವಿರಲಿದ್ದು, ಈಗಾಗಲೇ ಬುಕಿಂಗ್ ಆರಂಭವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೇಲ್ಸ್ ಮ್ಯಾನೇಜರ್ ಶ್ರೀಕಾಂತ್, ಅಡ್ಮಿನ್ ಮಂಜುಳಾ, ಶೋರೂಮ್ ಕನ್ಸಲ್ಟಂಟ್ ಅಪೂರ್ವ, ಫೀಲ್ಡ್ ಇನ್‌ಚಾರ್ಜ್ ವೀರೇಶ್ ಇದ್ದರು.

Leave a Comment

error: Content is protected !!