ಎಂ.ಬಿ. ತಿಪ್ಪಣ್ಣ ನಿಧನ

ದಾವಣಗೆರೆ, ಜೂ.೦೭: ಬೆಳ್ಳಿಗನೋಡು ಗ್ರಾಮದ ಎಂ.ಬಿ.ತಿಪ್ಪಣ್ಣನವರು(೬೬), ರಿಟೈರ್ಡ್ ಅಡಿಷನಲ್ ಡೈರೆಕ್ಟರ್, ಬಿಬಿಎಂಪಿ, ಬೆಂಗಳೂರು ಇವರು ಮಂಗಳವಾರ ಬೆಳಿಗ್ಗೆ ೧೧.೨೫ ಗಂಟೆಗೆ ದೈವಾಧೀನರಾಗಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ ೪ ಗಂಟೆಯವರೆಗೆ ವಾಸಸ್ಥಳ ಬೆಂಗಳೂರಿನ ಯಲಹಂಕದ ತರಳಬಾಳು ಎನ್‌ಕ್ಲೇವ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಬೆಳಿಗ್ಗೆ ೧೦ ಗಂಟೆಗೆ ದಾವಣಗೆರೆಯ ವಿದ್ಯಾನಗರದಲ್ಲಿನ ಸ್ವಗೃಹದಲ್ಲಿ ದರ್ಶನಕ್ಕೆ ಇರಿಸಲಾಗುವುದು. ಹಾಗೂ ಅಂತ್ಯಕ್ರಿಯೆಯನ್ನು ಶಿರಮಗೊಂಡನಹಳ್ಳಿ ಫಾರ್ಮ್, ದಾವಣಗೆರೆಯಲ್ಲಿ ಜೂ.೮ರ ಬುಧವಾರ ಮಧ್ಯಾಹ್ನ ೧:೦೦ ಗಂಟೆಗೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಬಿ.ವಾಮದೇವಪ್ಪ ಸಂತಾಪ

ನಮ್ಮ ಸ್ನೇಹಿತರು, ಮಾರ್ಗದರ್ಶಿಗಳಾದ/ಸ್ನೇಹಜೀವಿ/ಸಮಾಜದ ಕಾಳಜಿ ಉಳ್ಳವರಾದ/ಸದಾ ಹಸನ್ಮುಖಿ ಬೆಳ್ಳಿಗನೋಡು ಗ್ರಾಮದ ಎಂ.ಬಿ.ತಿಪ್ಪಣ್ಣನವರು ನಮ್ಮನ್ನಗಲಿರುವುದು ತುಂಬಾ ದುಃಖಕರ ಸಂಗತಿ. ಅಗಲಿ ಹೋದ ಆತ್ಮಕ್ಕೆ ಭಗವಂತನು ಸದ್ಗತಿ ಅನುಗ್ರಹಿಸಲಿ. ಅವರ ಅಗಲಿಕೆ ಇಂದ ದುಃಖತಪ್ತ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ. ವಾಮದೇವಪ್ಪ ಪ್ರಾರ್ಥಿಸಿದ್ದಾರೆ.

ದಾವಣಗೆರೆ ತಾಲ್ಲೂಕು ಬಾಡ ಗ್ರಾಮದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿಗಳು ಅದರ ಯಶಸ್ಸಿಗೆ ಕಾರಣೀಭೂತರಲ್ಲಿ ಒಬ್ಬರಾಗಿದ್ದ ಎಂ.ಬಿ. ತಿಪ್ಪಣ್ಣ ನಿಧನರಾಗಿರುವ ಸುದ್ದಿ ಕೇಳಿ ನಮ್ಮೆಲ್ಲರಿಗೂ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ದಾವಣಗೆರೆ ಜಿಲ್ಲೆಯ ಹಾಗೂ ದಾವಣಗೆರೆ ನಗರದ ಅವರ ಸ್ನೇಹಿತರು, ಹಿತೈಷಿಗಳು, ಬಂಧು -ಮಿತ್ರರು, ತರಳಬಾಳು ಬಡಾವಣೆ ನಿವಾಸಿಗಳು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವೈಯಕ್ತಿಕವಾಗಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ, ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದಯಾಮಯನಾದ ಭಗವಂತ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!