ಎಪಿಸಿ ಕಪ್ ಚದುರಂಗ ಸ್ಪರ್ಧೆ ತನುಶ್ ಜೆ ಗೆ ಪ್ರಥಮ ಸ್ಥಾನ

ಸುದ್ದಿ360 ದಾವಣಗೆರೆ ನ. 13: ನಗರದ ವಿನಾಯಕ ಬಡಾವಣೆ ಯಲ್ಲಿರುವ ಆನಂದ್ ಪಿಯು ಕಾಲೇಜ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿತ್ತು 

ಆನಂದ್ ಪಿಯು ಕಾಲೇಜಿನ ಅಧ್ಯಕ್ಷರಾದ ಆನಂದ್  ಚದುರಂಗ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಬುದ್ಧಿವಂತಿಕೆ ಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿಯಾಗಲಿದೆ. ಇದು ಬುದ್ಧಿವಂತರ ಆಟ ಅಲ್ಲ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಆಟ ಎಂದರು.

ಇದೇ ರೀತಿ ಪ್ರತಿ ವರ್ಷವೂ ಎಪಿಸಿ ಕಪ್ ಚದುರಂಗ ಸ್ಪರ್ಧೆಯನ್ನು  ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಏರ್ಪಡಿಸಲು ಸಂಸ್ಥೆಯ ವತಿಯಿಂದ ಉದ್ದೇಶಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲಾ ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು

5 ರಲ್ಲಿ  5ಸುತ್ತುಗಳನ್ನು ಗೆದ್ದು  ಪ್ರಥಮ ಸ್ಥಾನ ಪಡೆದ ತನುಶ್ ಜೆ ಅವರಿಗೆ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಯುವರಾಜ್ ಟ್ರೋಫಿ ವಿತರಿಸಿದರು.

5ಸುತ್ತುಗಳಲ್ಲಿ ನಡೆದ ಸ್ಪರ್ಧೆ

5 ರಲ್ಲಿ  5ಸುತ್ತುಗಳನ್ನು ಗೆದ್ದು  ಪ್ರಥಮ ಸ್ಥಾನ ಪಡೆದ ತನುಶ್ ಜೆ ಅವರಿಗೆ 5ಸಾವಿರ ನಗದು ಹಾಗೂ ಎಪಿಸಿ ಕಪ್ ಟ್ರೋಫಿ ನೀಡಿ ಸನ್ಮಾನಿಸಲಾಯಿತು  ಹಾಗೆ  ದ್ವಿತೀಯ ಬಹುಮಾನ ಪಡೆದ ಸ್ವಯಮ್ ಎಂಎಸ್ ಅವರಿಗೆ  3ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು. ಮೂರನೇ ಸ್ಥಾನ ಗೌರೀಶ್ ಹೆಚ್ ಜಿ ಪಡೆದರೆ, 4 ಮತ್ತು  5ನೇ ಸ್ಥಾನವನ್ನು ಪಡೆದ ಸಮರ್ಥ್ ಶರ್ಮಾ ಪುನೀತ್ ಎಂಜಿ ಯವರಿಗೆ  ಮೆಡಲ್ ಸರ್ಟಿಫಿಕೇಟ್ ನ್ನು ನೀಡಲಾಯಿತು 

ಈ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಪ್ರೌಢಶಾಲೆ 8,9,10 ನೇ ತರಗತಿಯ 50ಕ್ಕೂ ಹೆಚ್ಚು  ಮಕ್ಕಳು ಭಾಗವಹಿಸಿದ್ದರು  ಈ ಪಂದ್ಯಾವಳಿಯನ್ನು ನಡೆಸಿಕೊಟ್ಟ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಗಳಾದ ಯುವರಾಜ್ ಅವರನ್ನು ಆನಂದ್ ಪಿ ಯು ಕಾಲೇಜ್  ವತಿಯಿಂದ ಸನ್ಮಾನಿಸಲಾಯಿರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ಚಂದ್ರಶೇಖರ್ , ಅಕಾಡೆಮಿಯ ಕಾರ್ಯದರ್ಶಿಗಳಾದ ಗಿರೀಶ್ ಕಿರಣ್ ಅನಿತಾ ಇನ್ನೂ  ಮುಂತಾದವರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!