ಕರಾಟೆ ತರಬೇತಿದಾರರನ್ನು ಒದಗಿಸಲು ಅರ್ಜಿ ಆಹ್ವಾನ

ಸುದ್ದಿ360, ದಾವಣಗೆರೆ ಜು.28: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡುವ “ಓಬವ್ವ ಆತ್ಮ ರಕ್ಷಣಾ ಕಲೆ” ಯೋಜನೆಯನ್ನು ಅನುಷ್ಟಾನಗೊಳಿಸುವ ಸಲುವಾಗಿ ಮಾನ್ಯತೆ ಪಡೆದಿರುವ ಅರ್ಹ ತರಬೇತಿ ಸಂಸ್ಥೆಗಳಿಂದ ಮಹಿಳಾ ಕರಾಟೆ ತರಬೇತಿದಾರರನ್ನು ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲ್ಲಿಸುವವರು ಆಗಸ್ಟ್.03 ರ ಸಂಜೆ 05.30 ಗಂಟೆಯ ಒಳಗಾಗಿ ದಾವಣಗೆರೆ ಜಿಲ್ಲಾಡಳಿತ ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುದ್ದಾಂ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08192-262973 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

error: Content is protected !!