ಕೆರೆಯಲ್ಲಿ ಮುಳುಗಿದ ನಂದಿನಿ ಹಾಲಿನ ವಾಹನ

ಸುದ್ದಿ360 ದಾವಣಗೆರೆ.ಜು.04:  ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆರೆಯಲ್ಲಿ ಮುಳುಗಿರುವ ಘಟನೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಈ ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿನ ಹಾಲಿನ ಶಾಪ್ ಗಳಿಗೆ ಹಾಲು ಪೂರೈಸುತ್ತಿದ್ದ ವಾಹನ ಇದಾಗಿದ್ದು, ವಾಹನದಲ್ಲಿದ್ದ 500ಕ್ಕೂ ಅಧಿಕ ಲೀಟರ್ ಹಾಲು ನೀರು ಪಾಲಾಗಿದೆ.

ದೇವರಹಳ್ಳಿ ಅಂಗಡಿಗಳಿಗೆ ಹಾಲು ವಿತರಿಸುವ ಸಲುವಾಗಿ ನಲ್ಲೂರು ಕಡೆ ಹೊರಟಿದ್ದ ವಾಹನ ಇದಾಗಿತ್ತು. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!