ಜನರ ಒತ್ತಾಸೆಗೆ ಮಣಿದು ವಿಜಯೇಂದ್ರ ಸ್ಪರ್ಧೆ ಘೋಷಿಸಿದ್ದೇನೆ – ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ: ಬಿಎಸ್ ವೈ

ಸುದ್ದಿ360, ಬೆಂಗಳೂರು, ಜು.24: ಜನರ ಒತ್ತಾಸೆಗೆ ಮಣಿದು ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಬಿ.ವೈ ವಿಜಯೇಂದ್ರಗೆ ಬಿಟ್ಟುಕೊಡುವುದಾಗಿ ಶಿಕಾರಿಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದೇನೆ. ಆದರೆ ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಬಿ.ಎಸ್.ವೈ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿ, ಶುಕ್ರವಾರ ನಾನು ನೀಡಿದ ಹೇಳಿಕೆ ಗೊಂದಲಕ್ಕೆ ಎಡೆ ಮಾಡಿದೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ವಿಜಯೇಂದ್ರ ಸ್ಪರ್ಧೇ ಮಾಡುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದರು. ಇದು ನನ್ನ ಸಲಹೆ ಮಾತ್ರವಾಗಿದ್ದು ಬಜೆಪಿ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.

ಹಳೇ ಮೈಸೂರು ಸೇರಿದಂತೆ ಯಾವುದೇ ಭಾಗದಲ್ಲಿ ಸ್ಪರ್ದಿಸಿದರೂ ಗೆದ್ದುಬರುವ ಶಕ್ತಿ ಮತ್ತು ಜನರ ಪ್ರೀತಿ ವಿಜಯೇಂದ್ರಗೆ ಇದೆ. ಆದರೆ ಶಿಕಾರಿಪುರದ ಕ್ಷೇತ್ರದ ಜನತೆಯ ಕೋರಿಕೆಯನ್ನು ತಣಿಸಲು ನಾನು ಈ ಮಾತನ್ನು ಹೇಳಿರುವುದಾಗಿ ಅವರು ತಿಳಿಸಿದರು.

Leave a Comment

error: Content is protected !!