ಸುದ್ದಿ360, ದಾವಣಗೆರೆ ಜು.30: ನಗರದ ಜಿಎಂಎಸ್ ಅಕ್ಯಾಡೆಮಿ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್ ವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಕೌಶಲ್ಯತೆ ಗಳು ಮತ್ತು ಸಂದರ್ಶನ ಪ್ರಕ್ರಿಯೆಗಳ ಬಗ್ಗೆ ಐಐಟಿ ರೂರ್ಕೇ ಸಹಯೋಗದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲರಾದ ಶ್ವೇತ ಮರಿಗೌಡರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸ್ವಭಾವ ಮತ್ತು ನಡತೆ ಉತ್ತಮವಾಗಿ ಇಟ್ಟುಕೊಂಡಲ್ಲಿ ಏನನ್ನಾದರೂ ಸಾಧಿಸಬಹುದೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ತರಬೇತುದಾರರಾದ ಶ್ರೀಮತಿ ಮನಿಷಾ ಬೆಲಾನಿ ಆಗಮಿಸಿದ್ದರು. ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿಆರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಂಡು ಸಂದರ್ಶನ ಪ್ರಕ್ರಿಯೆಯನ್ನು ಧೈರ್ಯವಾಗಿ ಎದುರಿಸುವ ಕಲೆಯನ್ನು ಮತ್ತು ಜ್ಞಾನವನ್ನು ಈಗಿನಿಂದಲೇ ಸಂಪಾದಿಸಬೇಕೆಂದು ಕರೆಕೊಟ್ಟರು.
ಕು. ಪ್ರಿಯ ಆರ್ ವಿ ಮತ್ತು ಸಿಂಚನ ಟಿ ಆರ್ ಪ್ರಾರ್ಥನೆ ಮಾಡಿದರು. ಕು. ಕವಿತಾ ಸ್ವಾಗತ ಭಾಷಣ ಮಾಡಿದರೆ, ಹರ್ಷ ಕುಮಾರಿ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ಸೌಜನ್ಯ ಕೆಎಂ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹ ಆಡಳಿತಗಾರರಾದ ಶ್ರೀ ಶಿವಕುಮಾರ್ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಕೋರಿದರು, ವಿಭಾಗದ ಮುಖ್ಯಸ್ಥರ ಗಳು, ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.