ಜಿಎಂಐಟಿಯಲ್ಲಿ ಡಿಆರ್ ಡಿಓ ಸೆಮಿನಾರ್ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಜಿಎಂಐಟಿ ಕಾಲೇಜಿನಲ್ಲಿ  ಆಜಾದಿ ಕ ಅಮೃತ್ ಮಹೋತ್ಸವ ಟ್ಯಾಗ್ ಲೈನ್ ಅಡಿ  ಜುಲೈ 1 ರಿಂದ ಜುಲೈ 3 ರ ವರೆಗೆ ಮೂರು ದಿನಗಳ ಸೆಮಿನಾರ್ ಮತ್ತು ಪ್ರಾಜೆಕ್ಟ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾಹಿತಿ ನೀಡಿದರು.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,  ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಡಿ ಆರ್ ಡಿ ಓ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಎಂಐಟಿ ಹಾಗೂ  ಡಿಆರ್ ಡಿ ಓ ಸೆಮಿನಾರ್ ಮತ್ತು ಪ್ರಾಜೆಕ್ಟ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಬೆಂಗಳೂರು ಡಿಆರ್ ಡಿಒ ನಿಂದ 40 ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಳಲಿದ್ದಾರೆ. 3ಡಿ ಮೂವಿ ಮೂಲಕ ಪ್ರಾಜೆಕ್ಟ್ ಗಳ ಬಗ್ಗೆ 20 ನಿಮಿಷದ ಪ್ರದರ್ಶನ ಇರುತ್ತದೆ. ಈ ಕಾರ್ಯಾಗಾರದಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಬಹುದಾಗಿದೆ.  ಜು.3 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಜುಲೈ 1 ರಂದು ಬೆಳಗ್ಗೆ 10.30 ಕ್ಕೆ , ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಕಾರ್ಯಕ್ರಮ  ಉದ್ಘಾಟನೆ ಗೊಳ್ಳಲಿದೆ.  ಮುಖ್ಯ ಅತಿಥಿಗಳಾಗಿ ವಿಜ್ಞಾನಿಗಳು ಹಾಗೂ ಬೆಂಗಳೂರು ಡಿಆರ್ ಡಿಒ ನ ಜಿಟಿಆರ್ ಇ ವಿಭಾಗದ ನಿರ್ದೇಶಕ ಎಂ ಜೆಡ್ ಸಿದ್ಧಿಕ್ ಆಗಮಿಸಲಿದ್ದಾರೆ.  ಸಂಸದರಾದ ಡಾ . ಜಿ.ಎಂ ಸಿದ್ದೇಶ್ವರ್ ,  ಜಿಲ್ಲಾಧಿಕಾರಿಗಳಾದ  ಮಹಾಂತೇಶ ಬೀಳಗಿ , ಜಿ ಟಿ ಆರ್ ಇ ವಿಭಾಗದ ಉಪ ನಿರ್ದೇಶಕರಾದ ಡಾ ರಾಮಚಂದ್ರ , ದಾವಣಗೆರೆ ವಿಶ್ವವಿದ್ಯಾಲಯದ  ಉಪ ಕುಲಪತಿ ಡಾ ಲಕ್ಷ್ಮಣ್ , ಜಿಎಂಐಟಿ ಕಾಲೇಜಿನ ಚೇರ್ಮನ್ ಜಿ.ಎಂ ಲಿಂಗರಾಜು , ಜಿಎಂಐಟಿ ನಿರ್ದೇಶಕರಾದ ದಿವ್ಯಾನಂದ ಮತ್ತು ಪ್ರಾಂಶುಪಾಲರಾದ ವಿಜಯಕುಮಾರ್ ಉಪಸ್ಥಿತರಿರುವರು . ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಸೆಮಿನಾರ್ ಗಳನ್ನು ವಿವಿಧ ವಿಜ್ಞಾನಿಗಳು ಪ್ರಸ್ತುತಪಡಿಸಲಿದ್ದಾರೆ ಮತ್ತು ಅನೇಕ ಪ್ರಾಜೆಕ್ಟ್ ಪ್ರದರ್ಶನಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೋ-ಆರ್ಡಿನೇಟರ್ ಡಾ.ಸಿ.ವಿ ಶ್ರೀನಿವಾಸ್, ಪ್ರೊ.ತೇಜಸ್ವಿ ಕಟ್ಟಿಮನಿ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!