ಜಿಎಂಐಟಿ ಉದ್ಯೋಗಾಧಿಕಾರಿಗೆ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ

ಸುದ್ದಿ360 ದಾವಣಗೆರೆ, ಸೆ.15: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಮುಂಬೈ ಮೂಲದ ಸ್ಕಿಲ್ ಅಕಾಡೆಮಿ ಸಂಸ್ಥೆಯಿಂದ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ಈ ಸದಸ್ಯತ್ವದಿಂದ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ, ಹಲವು ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬಹುದಾಗಿದೆ ಇದಲ್ಲದೆ ವಿದ್ಯಾರ್ಥಿಗಳಿಗೆ ಕಂಪನಿಯ ಸಂದರ್ಶನ ಎದುರಿಸುವ ತಂತ್ರಗಳು ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಜ್ಞಾನ ನೀಡಬಹುದಾಗಿದೆ.

ಸ್ಕಿಲ್ ಅಕಾಡೆಮಿ ಸಂಸ್ಥೆಯಿಂದ ಸದಸ್ಯತ್ವ ಪ್ರಮಾಣ ಪತ್ರದೊಂದಿಗೆ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್.

ಸ್ಕಿಲ್ ಅಕಾಡೆಮಿ ಕ್ಯಾಂಪಸ್ ಪ್ರೋಗ್ರಾಮ್ ವತಿಯಿಂದ ಉದ್ಯಮ ಜಾಗೃತಿ ಅಧಿವೇಶನಗಳು, ಸರಿಯಾದ ವೃತ್ತಿ ನಿರ್ದೇಶನ, ಉದ್ಯೋಗ ತಯಾರಿ ಬೂಟ್ ಶಿಬಿರಗಳು ಮತ್ತು ಆನ್‌ಲೈನ್ ಆಪ್ಟಿಟ್ಯೂಡ್ ಅಭ್ಯಾಸಗಳನ್ನು  ಮಾಡಬಹುದಾಗಿದೆ ಎಂದು ತಿಳಿಸಿದರು.

ತೇಜಸ್ವಿ ಕಟ್ಟಿಮನಿ ಟಿ ಆರ್ ರವರು ಇತ್ತೀಚಿಗೆ ಉತ್ತರ ಪ್ರದೇಶದ ಹ್ಯಾಕ್2ಸ್ಕಿಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯರಾಗಿಯೂ ಆಯ್ಕೆಗೊಂಡಿದ್ದಾರೆ.

ಇವರುಗಳಿಗೆ ಸಂಸ್ಥೆಯ ಚೇರ್ಮನ್  ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ವೈ ಯು ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a Comment

error: Content is protected !!