ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ಸುದ್ದಿ360 ದಾವಣಗೆರೆ ನ.18:  ಇತ್ತೀಚೆಗೆ ನಡೆದ ವಿವಿಧ ಕಂಪನಿಗಳ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೆಕ್ ಮಹೇಂದ್ರ ಕಂಪನಿಯ ವತಿಯಿಂದ ಐದು ವಿದ್ಯಾರ್ಥಿಗಳು, ಹೆಕ್ಸಾವೇರ್ ಕಂಪನಿ ವತಿಯಿಂದ ಮೂರು ವಿದ್ಯಾರ್ಥಿಗಳು ಮತ್ತು ಆಪ್ಟಂ ಸಲ್ಯೂಷನ್ ಕಂಪನಿ ವತಿಯಿಂದ ಬಯೋಟೆಕ್ನಾಲಜಿ ವಿಭಾಗದ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಇನ್ನೂ ಅನೇಕ ಕಂಪನಿಗಳು 2023ಕ್ಕೆ ಹೊರ ಹೋಗುವ ವಿದ್ಯಾರ್ಥಿಗಳಿಗೆ ಸರದಿಯಲ್ಲಿದ್ದು, ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಕಂಪನಿ ಅವಕಾಶಗಳನ್ನು ನೀಡಲಾಗುವುದು ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.

ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ವೈ ಯು ಸುಭಾಷ್ ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!