ಜಿಟಿಟಿ ಫೌಂಡೇಶನ್ ವತಿಯಿಂದ ಜಿಎಂಐಟಿ ಪ್ಲೇಸ್ಮೆಂಟ್ ಅಧಿಕಾರಿಗೆ ಅಭಿನಂದನೆ ಮತ್ತು ಗೌರವ ಸೂಚಕ ಸನ್ಮಾನ

ಸುದ್ದಿ360, ದಾವಣಗೆರೆ, ಜು.21: ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಅಭಿನಂದನೆ ಮತ್ತು ಗೌರವಸೂಚಕ ಸನ್ಮಾನವನ್ನು ಏರ್ಪಡಿಸಲಾಗಿತ್ತು.

ಜಿ ಟಿ ಟಿ ಫೌಂಡೇಶನ್ ಸಂಸ್ಥೆಯು ಒಂದು  ಎನ್ ಜಿ ಓ ಲಾಭರಹಿತ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ ಉದ್ಯೋಗ ಕೊಡಿಸುವ ಜವಾಬ್ದಾರಿಯನ್ನೂ ಹೊತ್ತಿದೆ. ಯಾವುದೇ ಶುಲ್ಕವಿಲ್ಲದೆ ವಿದ್ಯಾರ್ಥಿಗಳ ಬುದ್ಧಿಮಟ್ಟ ಮತ್ತು ಶೈಕ್ಷಣಿಕವಾಗಿ ಬಲಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.

ಜಿಎಂಐಟಿ ಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ ಹಾಗೂ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರ ಪರಿಶ್ರಮವನ್ನು ಪರಿಗಣಿಸಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಭಿನಂದನೆ ಮತ್ತು ಗೌರವಸೂಚಕವಾಗಿ ಸನ್ಮಾನಿಸಲಾಯಿತು.

ಇದುವರೆಗೂ ಮಧ್ಯ ಕರ್ನಾಟಕ ಭಾಗದಲ್ಲಿ ಇವರ ಅವಧಿಯಲ್ಲಿ ಸುಮಾರು 86 ಕಂಪನಿಗಳ ಜೊತೆ ಒಡಂಬಡಿಕೆ, 70ಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳು, 600ಕ್ಕೂ ಅಧಿಕ ಕಂಪನಿಗಳು, 3000ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಆಯ್ಕೆ, 2 ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಗಳೊಡನೆ ಒಪ್ಪಂದ, ಎಐಸಿಟಿಇ- ಸಿಐಐ ಸಂಸ್ಥೆಯಿಂದ ಸತತ 3 ಬಾರಿ ವಿಭಾಗಕ್ಕೆ ಗೋಲ್ಡ್ ರೇಟಿಂಗ್, ಮೊದಲನೇ ಬಾರಿ ಟೈಮ್ಸ್ ಆಫ್ ಇಂಡಿಯಾದಲ್ಲಿ ವಿಭಾಗಕ್ಕೆ ಆಲ್ ಇಂಡಿಯಾ ಶ್ರೇಯಾಂಕ ಹೀಗೆ ಹಲವು ಸಾಧನೆಗಳ ಮೂಲಕ ಪರಿಚಿತರಾಗಿರುವ ಇವರಿಗೆ ಜಿಟಿಟಿ ಫೌಂಡೇಶನ್ ಸಂಸ್ಥೆಯ ಸೀನಿಯರ್ ಮ್ಯಾನೇಜರ್  ರಾಹುಲ್ ಪವರ್, ಡೈರೆಕ್ಟರ್ ಆಪರೇಷನ್ ವಿಭಾಗದ  ಅಮಿತ್ ಭೋಸಲೆ ಮತ್ತು ಯುನಿವರ್ಸಿಟಿ ಅಲ್ಲಿಯನ್ಸ್ ಮ್ಯಾನೇಜರ್  ನವನೀತ್ ಕುಮಾರ್ ಅಭಿನಂದನೆ ಮತ್ತು ಗೌರವಸೂಚಕ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರು ಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!