ಜಿಲ್ಲಾ ಉಸ್ತುವಾರಿ ಸಚಿವರಿಗೆ ದಾವಣಗೆರೆ ಪಿಕ್ನಿಕ್‍ ಸ್ಪಾಟ್‍ !

ಸುದ್ದಿ 360 ದಾವಣಗೆರೆ, ಜೂ.15:

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ದಾವಣಗೆರೆ ಜಿಲ್ಲೆಗೆ ಪಿಕ್ನಿಕ್‍ಗೆ ಬಂದು ಹೋಗುವವರಂತೆ ಬಂದು ಹೋಗುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ ಅವರಿಗೆ ಮಂತ್ರಿಯಾಗಲು ಅರ್ಹತೆ, ಯೋಗ್ಯತೆ ಇಲ್ಲವೇ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕಾಮಗಾರಿ ಉದ್ಘಾಟನೆ ಮಾಡಲು ಜಿಲ್ಲೆಗೆ ಬರುತ್ತಿದ್ದಾರೆಯೇ ಹೊರತು ಯಾವುದೇ ನೂತನ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಬರುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಡಿ.ಬಸವರಾಜ್, ನಿಖಿಲ್ ಕೊಂಡಜ್ಜಿ, ಹೊದಿಗೆರೆ ರಮೇಶ್, ಬಿ.ಎಚ್.ವೀರಭದ್ರಪ್ಪ, ಡೋಲಿ ಚಂದ್ರಶೇಖರ್, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

Leave a Comment

error: Content is protected !!