ಜು.10- ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ

ಸುದ್ದಿ360, ದಾವಣಗೆರೆ, ಜು.9:  ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜು.10ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಡೆಯಲಿದೆ.

ಶಿಬಿರದಲ್ಲಿ ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ರಕ್ತ ಪರೀಕ್ಷೆ, ವಿಶೇಷವಾದ ಗರ್ಭಚೀಲದ ಬಾಯಿ ಸ್ರಾವ ಪರೀಕ್ಷೆ ಮಾಡಲಾಗುವುದು, ಇದರ ಜೊತೆಗೆ ಉಚಿತವಾಗಿ ಔಷಧ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: 96060 48423 ಗೆ ಕರೆ ಮಾಡಿ ಹೆಸರು ನೊಂದಣಿ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಕಮಿಟಿ ಟ್ರಸ್ಟ್ನ ಅಧ್ಯಕ್ಷರಾದ ಸಂಘವಿ ಮಹಾವೀರ್ ಜೈನ್ ತಿಳಿಸಿದ್ದಾರೆ.

Leave a Comment

error: Content is protected !!