ಜು.17ಕ್ಕೆ ಅಭಿನಂದನಾ ಸಮಾರಂಭ

ಸುದ್ದಿ360, ದಾವಣಗೆರೆ, ಜು.16: ನಗರದ ನೂತನ ಕಾಲೇಜು ರಸ್ತೆಯ ಸವಿತಾ ಹೋಟೆಲ್ ಬಳಿ ಇರುವ ನಿರ್ವರ್ಣ ಆರ್ಟ್ ಗ್ಯಾಲರಿಯಲ್ಲಿ ಜು.17ರ ಬೆಳಗ್ಗೆ 10.30ಕ್ಕೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಫೈಜ್ನಟ್ರಾಜ್‌ರ ಸಾಹಿತ್ಯ ಕೃತಿಗಳ ಅವಲೋಕನ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಪ್ರಗತಿಪರ ಸಾಹಿತ್ಯ ಪರಿಷತ್ತು ಮತ್ತು ಕಾವ್ಯ ಮಂಡಳ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ಡಾ. ಆನಂದ್ ಋಗ್ವೇದಿ ಚಾಲನೆ ನೀಡುವರು. ಬಾ.ಮ. ಬಸವರಾಜಯ್ಯ ಅಧ್ಯಕ್ಷತೆ ವಹಿಸಲಿದ್ದು, ಕಥೆಗಳ ಕುರಿತು ಡಾ.ಜಿ. ಕಾವ್ಯಶ್ರೀ, ಕಾವ್ಯ ಕುರಿತು ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಮಾತನಾಡುವರು. ಸನಾವುಲ್ಲಾ ನವಿಲೇಹಾಳ್, ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ನಾಗರಾಜ ಸಿರಿಗೆರೆ, ಹಜರತ್ ಅಲಿ, ಕೃಷ್ಣ ನಾಯಕ್, ಅಂಜನಾದ್ರಿ, ಟಿ.ಎಸ್. ರಾಜೇಂದ್ರ ಪ್ರಸಾದ್ ತೇಕಲವಟ್ಟಿ ಭಾಗವಹಿಸುವರು.

Leave a Comment

error: Content is protected !!