ಸುದ್ದಿ 360 ದಾವಣಗೆರೆ, ಜೂ. 27: ನಗರದ ವಿಶ್ವವಿದ್ಯಾನಿಲಯ ಬಿಡಿಟಿ ಇಂಜಿನಿಯರಿಂಗ್ (ಯುಬಿಡಿಟಿ) ಕಾಲೇಜ್‌ನಲ್ಲಿ ಜೂನ್ 28ರ ಸಂಜೆ 5 ಗಂಟೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಯ ಭವನದದಲ್ಲಿ ಚೈತ್ರ 2022 ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಲಾವಿದ, ಕನ್ನಡ ಚಲನಚಿತ್ರ ಮಂಡಳಿ ನಿರ್ದೇಶಕ ನಾಗೇಂದ್ರ ಶಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ವನಿತಾ ಸಮಾಜ ಅಧ್ಯಕ್ಷೆ ಪದ್ಮ ಪ್ರಕಾಶ್ ಉಪಸ್ಥಿತರಿರುವರು. ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಸ್. ಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ.