ಜ.5ಕ್ಕೆ ದಾವಣಗೆರೆಗೆ ಶಿವರಾಜ್ ಕುಮಾರ್ ಹಾಗೂ ವೇದ ಚಿತ್ರತಂಡ

ವೇದ ಚಿತ್ರದ ‘ಶಿವ ಸಂಭ್ರಮಾಚರಣೆ’

ಸುದ್ದಿ360 ದಾವಣಗೆರೆ ಜ.3: ಶಿವರಾಜ್ ಕುಮಾರ್ ಅವರ 125ನೇ ಚಿತ್ರ ವೇದ ಜನಮೆಚ್ಚುಗೆ ಪಡೆಯುತ್ತಿದ್ದು, ಚಿತ್ರತಂಡ  ಸಂಭ್ರಮ ಪಡುತ್ತಿರುವ  ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳಿಂದ ‘ಶಿವ ಸಂಭ್ರಮಾಚರಣೆ’ ನಡೆಯುತ್ತಿದ್ದು, ಅಂತೆಯೇ ದಾವಣಗೆರೆಯಲ್ಲಿ ಕೂಡ ಜ.5ರಂದು ಡಾ. ರಾಜ್‍ಕುಮಾರ್, ಡಾ. ಶಿವರಾಜ್ ಕುಮಾರ್, ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಸಂಭ್ರಮಾಚರಣೆ ನಡೆಸುತ್ತಿರುವುದಾಗಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಸಂಭ್ರಮಾಚರಣೆಯಲ್ಲಿ ಡಾ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಭಾಗವಹಿಸಲಿದ್ದು, ನಗರದ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದಿಂದ ಇ.ಎಸ್.ಐ. ಮುಂಭಾಗ ಮತ್ತು ಕೆ.ಟಿ.ಜೆ. ನಗರ, ಶಿವಪ್ಪಯ್ಯ ಸರ್ಕಲ್, ಜಯದೇವ ಸರ್ಕಲ್, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ, ಅಶೋಕ ಚಿತ್ರಮಂದಿರಕ್ಕೆ ಡಿ.ಜೆ. ಹಾಗೂ ಭಾರಿ ವೈಭವದ ಮೆರವಣಿಗೆ ನಡೆಯಲಿರುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಾ.ಹ. ಶಿವಕುಮಾರ್, ಟಿ. ಚಂದ್ರಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾಗ್ಯದೇವಿ ವೈ., ಪ್ರಕಾಶ್ ಜಿ.ಪಿ. ಹರಿಹರ ಇದ್ದರು.

Leave a Comment

error: Content is protected !!