ಸುದ್ದಿ360 ದಾವಣಗೆರೆ ಜ.3: ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠದ ಶಂಕುಸ್ಥಾಪನೆಯ 14ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳವರ ಜಂಗಮ ದೀಕ್ಷೆಯ 24ನೇ ಹಾಗೂ 39ನೇ ಜನ್ಮದಿನದ ವಾರ್ಷಿಕೋತ್ಸವ ಮತ್ತು ಜಗದ್ಗುರು ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 5ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಇದೇ ಜನವರಿ 5 ಮತ್ತು 6ರಂದು 2 ದಿನಗಳ ಕಾಲ ಕಾಯಕ ಜನೋತ್ಸವ 2023ನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ. 5ರ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು, ಹರಿಹರ ರಾಜನಹಳ್ಳಿ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾಯಕ ಜನೋತ್ಸವ 2023 ಕಾರ್ಯಕ್ರಮ ಹಾಗೂ ಶ್ರೀಮಠದ ಶ್ರೀಮಾಚಿದೇವ ಮಹಾದ್ವಾರದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ನೆರವೇರಿಸುವರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಚಿದೇವ ಪ್ರಶಸ್ತ್ರಿ ಪ್ರದಾನ ಮಾಡಲಾಗುವುದು. ಶ್ರೀ ಮಲ್ಲಿಗೆಮ್ಮ ಮಾತೋಶ್ರೀ ದಾಸೋಹ ಭವನದ ಉದ್ಘಾಟನೆಯನ್ನು ಕೃಷಿ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಚಿತ್ರದುರ್ಗ, ಕೆ.ಪೂರ್ಣಿಮಾ ಹಿರಿಯೂರು, ಎಂ.ಚಂದ್ರಪ್ಪ ಹೊಳಲ್ಕೆರೆ, ಗೂಳಿಹಟ್ಟಿ ಶೇಖರ್, ಹೊಸದುರ್ಗ, ಟಿ.ರಘುಮೂರ್ತಿ ಚಳ್ಳಕೆರೆ, ವಿಧಾನ ಪರಿಷತ್ತು ಸದಸ್ಯ ಕೆ.ಎಸ್.ನವೀನ್, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತದ ಅಧ್ಯಕ್ಷ ರಘು ಕೌಟಿಲ್ಯ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ.ರಾಜು ಎಂ.ತಲ್ಲೂರು ಆಗಮಿಸುವರು.
5ರಂದು ಸಂಜೆ 4ರಿಂದ 9ರವರೆಗೆ ವಿವಿಧ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮಲ್ಲಿಗೆಮ್ಮ ಮಾತೋಶ್ರೀ ಪ್ರಶಸ್ತಿಯನ್ನು ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಇವರಿಗೆ ನೀಡಲಾಗುವುದು. ಇದೇ ವೇಳೆ ಅತ್ಯುತ್ತಮ ಮಡಿವಾಳ ಸಮಾಜ ಸುಧಾರಣಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿಶ್ವ ವಂದ್ಯ ಸಾಧನಾ ಶ್ರೀ ಪ್ರಶಸ್ತಿಯನ್ನು ಬಳ್ಳಾರಿಯ ಅಂತರಾಷ್ಟ್ರೀಯ ವ್ಹೀಲ್ ಚೇಲ್ ಕ್ರಿಕೆಟರ್ ವಿ.ತಿಪ್ಪೇಸ್ವಾಮಿ, ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರು, ಹೊನ್ನಾವರದ ಶ್ರೀರಾಮ ಜಾದೂಗಾರ ಇವರಿಗೆ ನೀಡಲಾಗುವುದು.
ನಂತರ ಮಹಿಳಾ ಸಮಾವೇಶ ನಡೆಯಲಿದ್ದು, ಇಸ್ರೋದ ಡಾ.ಎಂ.ಶಶಿಕಲಾ ಉದ್ಘಾಟಿಸುವರು. ಈ ವೇಳೆ ಮಹಿಳಾ ಮುಖಂಡರಾದ ಪೂರ್ಣಿಮಾ ಅಶ್ವಥ್ ನಾರಾಯಣ್, ವಿಜಯಲಕ್ಷ್ಮೀ ಅಂಜಿನಪ್ಪ, ಸುಗುಣಾ ಕೃಷ್ಣಪ್ಪ, ಮಂಜುಳಾ ಮಲ್ಲಿಕಾರ್ಜುನ, ಲಲಿತಮ್ಮ, ಪದ್ಮ ರವಿ, ಅಕ್ಕಾ ಸರೋಜಿನಿ ಮಾಳಗಿ, ಎಂ.ಎಸ್.ನಾಗರತ್ನ ಕಟ್ಟಿಮನಿ, ನಾಗಮ್ಮ, ಪಾರ್ವತಮ್ಮ ಉಪಸ್ಥಿತಿ ಇರುವರು. ಈ ವೇಳೆ ವಿಶ್ವ ವಂದ್ಯ ಸಾಧನಾ ಶ್ರೀ ಪ್ರಶಸ್ತಿ ವಿತರಿಸಲಾಗುವುದು.
ತದನಂತರ ಸಾಧಕರ ಸಮಾವೇಶ ನಡಯಲಿದ್ದು, ದೆಹಲಿಯ ಮಡಿವಾಳ ಸಮುದಾಯ ಪ್ರತಿಷ್ಠಾನದ ಅಧ್ಯಕ್ಷ ಈಶ್ವರ ಮಡಿವಾಳ ಉದ್ಘಾಟಿಸುವರು. ಅತಿಥಿಗಳಾಗಿ ಎಂ.ಸಿದ್ದರಾಜು, ಎಸ್.ಸದಾನಂದಬಾಬು, ಬಿ.ಎಂ.ಶಶಿಧರ, ಡಾ.ಅಯ್ಯಪ್ಪ ಅಗಸರ, ಪ್ರಶಾಂತ ನಾಗಲಾಪೂರ, ಕೆ.ಮಂಜುನಾಥ್, ಡಿ.ವಿನಯ್ ಆಗಮಿಸುವರು. ಈ ವೇಳೆ ಮಾಚಿದೇವ ಸೇವಾ ಪ್ರಶಸ್ತಿಯನ್ನು ಜೆ.ಎಂಜೇರಪ್ಪ, ಶಿವಾನಂದಯ್ಯ ಹಿರೇಮಠ್ ಇವರಿಗೆ ನೀಡಲಾಗುವುದು.
ಇದಲ್ಲದೇ ಕಾಯಕ ಯೋಗಿ ಪ್ರಶಸ್ತಿಯನ್ನು ಬೆಂಗಳೂರಿನ ನಾರಾಯಣಪ್ಪ, ಗಂಗಮ್ಮ ದಂಪತಿಗಳಿಗೆ, ಭೂದಾನಶ್ರೀ ಪ್ರಶಸ್ತಿಯನ್ನು ಸಿರಸಿಯ ಗಣಪತಿ ಬಂಗಾರಿ ಮಡಿವಾಳ, ರಾಧಾ ದಂಪತಿಗಳಿಗೆ, ಖಾದಿ ಗ್ರಾಮೋದ್ಯೋಗ ಸೇವಾ ಪ್ರಶಸ್ತಿಯನ್ನು ಮಹಾದೇವಪ್ಪಾ ಮಡಿವಾಳ ಇವರಿಗೆ ನೀಡಲಾಗುವುದು. ಇದೇ ವೇಳೆ 8 ಕುಟುಂಬಗಳಿಗೆ ವಿಶ್ವ ಆದರ್ಶ ಕುಟುಂಬ ಪ್ರಶಸ್ತಿ ನೀಡಲಾಗುವುದು.
ನಂತರ ಸಾಂಸ್ಕøತಿಕ ಸಂಭ್ರಮ ಉದ್ಘಾಟನೆ ನಡೆಯಲಿದ್ದು, ನಾಟಕ ನಿರ್ದೇಶಕ ಡಾ.ಅಶ್ವತ್ ನಾರಾಯಣ ನೆರವೇರಿಸುವರು. ಅತಿಥಿಗಳಾಗಿ ಚಿತ್ರದುರ್ಗದ ಡಾ.ವಿ.ಬಸವರಾಜ, ಬಳ್ಳಾರಿಯ ಎಲ್.ರವಿಕುಮಾರ್, ಅರಕಲಗೂಡಿನ ಬಿ.ಸಿ.ಶಶಿಧರ್, ಹೊಸದುರ್ಗದ ಟಿ.ಜಯಣ್ಣ ಬಾಗೂರು, ಬೆಂಗಳೂರಿನ ಡಾ.ತಿಮ್ಮಪ್ಪ ಬಳ್ಳಾರಿ, ಧರ್ಮನಾರಾಯಣ, ಬಿ.ಕೇಶವ, ಸಿದ್ದಾಪುರದ ಪ್ರಕಾಶ್ ಹೊಸೂರು, ಚಿತ್ರದುರ್ಗದ ರಾಮಜ್ಜ ಆಗಮಿಸುವರು. ಇದೇ ವೇಳೆ ವಿವಿಧ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಇದಲ್ಲದೇ ಮಡಿವಾಳರ ಕುಲ ಕಸುಬಾದ ಬಟ್ಟೆ ತೊಳೆದು ಜೀವನ ಸಾಗಿಸುತ್ತಿರುವ ರಾಜ್ಯದ 236 ತಾಲೂಕುಗಳಿಂದ ತಲಾ ಒಬ್ಬರಂತೆ 236 ಜನರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗುವುದು.
ಜನವರಿ 6ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ವಾದ್ಯಮೇಳ ಹಾಗೂ ಕಲಾಮೇಳಗಳೊಂದಿಗೆ ಶರಣ ಶ್ರೀ ಮಾಚಿದೇವರ ಭಾವಚಿತ್ರ ಹಾಗೂ ವಚನ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ 10.30ಕ್ಕೆ ಜಗದ್ಗುರು ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 5ನೇ ಪೀಠಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮಡಿವಾಳ ಸಮುದಾಯದ ಎಲ್ಲಾ ಗಣ್ಯರು, ರಾಜ್ಯದ ಎಲ್ಲಾ ಜಿಲ್ಲೆಗಳ ಮುಖಂಡರು, ಮಡಿವಾಳ ಸಂಘ, ಟ್ರಸ್ಟ್, ಸಮಿತಿ, ಒಕ್ಕೂಟ, ಮಡಿಕಟ್ಟೆ, ಮಹಿಳಾ ಘಟಕ, ಯುವ ಘಟಕಗಳ ಎಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ಧಾರೆ ಎಂದು ಮಾಹಿತಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ವಿಜಯಕುಮಾರ್, ಡೈಮಂಡ್ ಮಂಜುನಾಥ್, ಅಂಜಿನಪ್ಪ ಪೂಜಾರ, ಪತ್ರಕರ್ತ ಎಂ.ವೈ.ಸತೀಶ್, ಎಂ.ರುದ್ರೇಶ್, ಎನ್.ರಾಜಕುಮಾರ, ಕಿಶೋರ್ ಕುಮಾರ್, ಮಂಜುನಾಥ್ ಕಕ್ಕರಗೊಳ್ಳ, ಕಿತ್ತೂರು ಪ್ರಕಾಶ್ ಇತರರು ಇದ್ದರು.