ದಕ್ಷಿಣ ಕೇದಾರವಾಗಲಿದೆ ದೇವನಗರಿ ದಾವಣಗೆರೆ

ಸುದ್ದಿ360, ದಾವಣಗೆರೆ, ಜು.10:  ಉತ್ತರದಲ್ಲಿ ಕೇದಾರನಾಥನ ಸನ್ನಿದಾನ ಇರುವಂತೆ ದಕ್ಷಿಣದಲ್ಲೂ ಕೇದಾರನಾಥ ಮಠ ಮತ್ತು ಕೇದಾರ ಮಾದರಿಯ ಭವ್ಯ ಮಂದಿರ ನಿರ್ಮಾಣ ಮಾಡುವ ಇಚ್ಛೆಯಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ನಡೆದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ನಂತರ ಭಕ್ತರನ್ನುದ್ದೇಶಿಸಿ ಸಂದೇಶ ನೀಡುತ್ತಾ, ದಾವಣಗೆರೆ-ಹರಿಹರ ನಡುವೆ ಬರುವ ಶಂಶೀಪುರ ಬಳಿ ನಾವು ಬಂದು ತಂಗಲು ಗುರು ನಿವಾಸ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2023ರ ಜ.27ರಂದು ಶ್ರೀ ರಂಭಾಪುರಿ ಶ್ರೀಗಳು ಹಾಗೂ ನಮ್ಮ ಸಾನ್ನಿಧ್ಯದಲ್ಲಿ ಗುರು ನಿವಾಸ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯದಲ್ಲಿ ನಾವು ನಿಮಿತ್ತ ಮಾತ್ರವಾಗಿದ್ದು, ಕೇದಾರನಾಥನೇ ತನ್ನ ಭಕ್ತರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ ಎಂದು ಹೇಳಿದರು.

ಉತ್ತರದಲ್ಲಿರುವ ಕೇದಾರಕ್ಕೆ ದಕ್ಷಿಣದವರು ಭೇಟಿ ನೀಡುವುದು ಕಷ್ಟಕರವಾಗಿದ್ದು, ಭಕ್ತರಿಗೆ ಕೇದಾರನಾಥನ ದರ್ಶನಕ್ಕಾಗಿ ಕರ್ನಾಟಕದ ಕೇಂದ್ರ ಭಾಗವಾಗಿರುವ ದೇವನಗರಿ ದಾವಣಗೆರೆ ದಕ್ಷಿಣ ಕೇದಾರ ಕ್ಷೇತ್ರವಾಗಿ ರೂಪುಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದ್ದು, ದಾವಣಗೆರೆ ‘ದಕ್ಷಿಣ ಕೇದಾರ’ ಎಂದು ಪ್ರಸಿದ್ಧಿ ಪಡೆಯಲಿದೆ ಎಂದು ನುಡಿದರು.

admin

admin

Leave a Reply

Your email address will not be published. Required fields are marked *

error: Content is protected !!