ದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್ ದಾಖಲೆ ಅಂತರದ ಗೆಲುವು

ಸುದ್ದಿ ೩೬೦ ಮೈಸೂರು, ಜೂ.16:
ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಫಲಿತಾಂಶ ಕಡೆಗೂ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಬರೋಬ್ಬರಿ 12,205 ಮತಗಳ ಅಂತರದ್ದಿಂ ಜಯ ದಾಖಲಿಸಿದ್ದಾರೆ.
ಮಧು ಮಾದೇಗೌಡ 46,083 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ.‌ ರವಿಶಂಕರ್ 33,878 ಮತಗಳನ್ನು ಪಡೆಯುವ ಮುಲಕ ಸೋಲುಂಡರು. ಇದು ರವಿಶಂಕರ್ಗ ಅವರ ಸತತ ಎರಡನೇ ಸೋಲು.
ಉಳಿದಂತೆ ಜೆಡಿಎಸ್‌ನ ಎಚ್‌.ಕೆ.ರಾಮು 17,072, ಪಕ್ಷೇತರ ಸದಸ್ಯರಾದ ಪ್ರಸನ್ನ 6,470, ವಿನಯ್ 3,672 ಹಾಗೂ
ವಾಟಾಳ್ ನಾಗರಾಜ್ 480 ಮತ ಪಡೆದರು. ಚಲಾವಣೆಯಾದ ಒಟ್ಟು ಮತಗಳಲ್ಲಿ 7307 ತಿರಸ್ಕೃತ ಮತಗಳಿದ್ದವು.
ಸೋಮವಾರ 150 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ 1,41,963 ಮತದಾರರ ಪೈಕಿ 99,304 ಮತದಾರರು ಹಕ್ಕು ಚಲಾಯಿಸಿದ್ದರು (ಶೇ 69.95 ಮತದಾನ). ಬುಧವಾರ ಮತ್ತು ಗುರುವಾರ ನಾಲ್ಕು ಕೊಠಡಿಗಳಲ್ಲಿ ಒಟ್ಟು 28 ಟೇಬಲ್‌ಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆದಿದ್ದು, 90 ಸಿಬ್ಬಂದಿ ನಿಯೋಜಿಸಲಾಗಿತ್ತು. ಮೇಲ್ವಿಚಾರಕರಾಗಿ 28 ಮಂದಿ ಕಾರ್ಯ ನಿರ್ವಹಿಸಿದರು. ಭದ್ರತೆಗಾಗಿ 158 ಪೊಲೀಸ್ ‌ಸಿಬ್ಬಂದಿ ನಿಯೋಜಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

808 ಮತಗಳ ಕೊರತೆ

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ 17 ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿದ ಬಳಿಕವೂ, ಅತಿ ಹೆಚ್ಚು ಮತ ಗಳಿಸಿದ್ದ ಮಧು ಅವರಿಗೆ ನಿಗದಿತ ಕೋಟಾ ತಲುಪಲು (46083) 808 ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಸ್ಪರ್ಧಿ ಮೈ.ವಿ. ರವಿಶಂಕರ್ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಕೋಟ ತಲುಪುತ್ತಿದ್ದಂತೆಯೇ ಎಣಿಕೆ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆ, ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಕ್ತಾಯವಾಯಿತು. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಹಾಗೂ ಅವರ ಅಭಿಮಾನಿಗಳು ನಿರಂತರ 29 ಗಂಟೆ ಕಾಯಬೇಕಾಯಿತು.

admin

admin

Leave a Reply

Your email address will not be published. Required fields are marked *

error: Content is protected !!