ದಾವಣಗೆರೆಯಲ್ಲಿ ಸೆ.5ರಿಂದ ನಾಲ್ಕು ದಿನಗಳ ಧರ್ಮಸಮ್ಮೇಳನ – ಸಂಗೀತಯುಕ್ತ ಇಷ್ಟಲಿಂಗ ಪೂಜೆ

ಸುದ್ದಿ360 ದಾವಣಗೆರೆ, ಸೆ.01: ಶ್ರೀಶೈಲ ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 36ನೇ ವಾರ್ಷಿಕ ಪುಣ್ಯಾರಾಧನೆ, ಶ್ರೀಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 11ನೇ ವರ್ಷದ ಸ್ಮರಣೋತ್ಸವ, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ದ್ವಾದಶ ಪೀಠಾರೋಹಣ ಮಹೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ ಕಾರ್ಯಕ್ರಮಗಳು ಸೆ.5, 6, 7 ಮತ್ತು 8ರಂದು ನಗರದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇಲ್ಲಿನ ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನ ಕಲಾಪ್ರಕಾಶ ವೃಂದದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಸೆ.5ರಂದು ಬೆಳಿಗ್ಗೆ 8ಕ್ಕೆ ವಿನಬನಗರದ ಶ್ರೀ ಶೈಲ ಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ಪಾಲಿಕೆ ಮೇಯರ್ ಜಯಮ್ಮ ಗೋಪಿನಾಥ್ ನೆರವೇರಿಸುವರು. ಸಂಜೆ 6ಕ್ಕೆ ಶ್ರೀ ಶೈಲ ಮಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಧರ್ಮಸಮಾರಂಭದಲ್ಲಿ ಹೊನ್ನಾಳಿ ಹಿರೇಮಠದ ಡಾ.ಒಡೆಯರ್ ಚೆನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಶಾಸಕ ಎಸ್.ಎ.ರವೀಂದ್ರನಾಥ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ಎ.ಎಸ್. ವೀರಣ್ಣ, ಡಿ.ಎಂ.ಹಾಲಸ್ವಾಮಿ, ಬಾ.ಮ. ಬಸವರಾಜಯ್ಯ, ಮಹಾನಗರಪಾಲಿಕೆ ಸದಸ್ಯ ಎ. ನಾಗರಾಜ್, ಭಾಗವಹಿಸಲಿದ್ದು, ವೀರಶೈವ ಪರಂಪರೆ ಮತ್ತು ಪಂಚಪೀಠಗಳ ಕೊಡುಗೆ ಕುರಿತಾಗಿ ಟಿ. ಶಿವಕುಮಾರಸ್ವಾಮಿ ಉಪನ್ಯಾಸ ನೀಡಲಿದ್ದಾರೆ.

ಸೆ.6ರಂದು ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶೈಲ ಜಗದ್ಗುರುಗಳು ವಹಿಸಲಿದ್ದು, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಲಿದ್ದಾರೆ. ವಿವಿಧ ಮಠಾಧೀಶರು ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಎಚ್ ಎಸ್ ಶಿವಶಂಕರ್,  ಬಿ.ಪಿ.ಹರೀಶ್‌, ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ, ಹನಗವಾಡಿ ವೀರೇಶ್, ಯಶವಂತರಾವ್ ಜಾಧವ್, ದೇವರಮನಿ ಶಿವಕುಮಾರ್, ಚಿದಾನಂದಪ್ಪ, ಬಿಜೆ ಅಜಯ್ ಕುಮಾರ್, ಡಿ.ಬಿ. ಶಿವಾನಂದಪ್ಪ, ಶ್ರೀನಿವಾಸ್ ದಾಸಕರಿಯಪ್ಪ ಭಾಗವಹಿಸಲಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯರ ಕೊಡುಗೆ ಕುರಿತಾಗಿ ಜಯಶ್ರೀ ಹೊಸಮನಿ ಉಪನ್ಯಾಸ ನೀಡಲಿದ್ದಾರೆ.

ಅಡ್ಡಪಲ್ಲಕ್ಕಿ ಉತ್ಸವ

ಸೆ.7ರಂದು ಕಾಶೀ ಮಹಾಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಇದೇ ಪ್ರಥಮ ಬಾರಿಗೆ ಪುರಪ್ರವೇಶ ಮಾಡಲಿದ್ದು, ಸುಮಾರು 100ಕ್ಕೂ ಹೆಚ್ಚು ಬೈಕ್ ಗಳ ರ್ಯಾಲಿ ಮುಖಾಂತರ ಸ್ವಾಗತಿಸಲಾಗುವುದು, ಬೆಳಿಗ್ಗೆ 11 ಗಂಟೆಗೆ ಬೆಳ್ಳಿ, ಅಡ್ಡಪಲ್ಲಕ್ಕಿ ಉತ್ಸವ ಶ್ರೀಶೈಲ ಮಠದಿಂದ ಪ್ರಾರಂಭವಾಗಲಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಸಮಾರಂಭ ನಡೆಯುವ ದಾವಣಗೆರೆ ಹರಿಹರ ಅರ್ಬನ್ ಸಹಕಾರಿ ಸಮುದಾಯ ಭವನ ತಲುಪಲಿದೆ ಎಂದು ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸೆ.7ರ ಸಂಜೆ 6ಕ್ಕೆ ನಡೆಯುವ ಸಮಾರಂಭದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶೈಲ ಮಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶೀ ಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಡಾ. ಶಾಮನೂರು ಶಿವಶಂಕರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಜವಳಿ ವರ್ತಕರಾದ ಬಿ.ಸಿ.ಉಮಾಪತಿ, ಜಿಲ್ಲಾಧಿಕಾರಿ ಶಿವಾನಂದ ಕಾಪಸಿ ಪಾಲ್ಗೊಳ್ಳಲಿದ್ದಾರೆ. ಎನ್.ಎ. ಮುರುಗೇಶ್ ಆಶಯನುಡಿ ನುಡಿಯಲಿರುವುದಾಗಿ ತಿಳಿಸಿದರು.

ಸೆ.8ರಂದು ಬೆಳಿಗ್ಗೆ 8 ಗಂಟೆಗೆ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೆರವೇರಿಸಲಿದ್ದು, ನಂತರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.

ಸೆ.7ರ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಓಂಕಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಭಕ್ತರಿಗೆ ಸಾಮೂಹಿಕವಾಗಿ ಶಿವದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಧೀಕ್ಷೆ ಹೊಂದುವವರು ವ್ಯವಸ್ಥಾಪಕ ಕೆ.ಬನ್ನಯ್ಯ-ಮೊ: 9986922077 ಸಂಪರ್ಕಿಸಿ ನೋಂದಾಯಿಸಲು ತಿಳಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ, ಅಥಣಿ ವೀರಣ್ಣ, ಬಾ.ಮ.ಬಸವರಾಜಯ್ಯ, ದೇವರಮನೆ ಶಿವಕುಮಾರ್, ಎನ್.ಎ ಮುರುಗೇಶ್, ಡಿ.ಎಂ. ಹಾಲಸ್ವಾಮಿ, ಕೆ.ಎಂ. ಚನ್ನಬಸಯ್ಯ, ಆವರಗೊಳ್ಳ ವಾಗೀಶಯ್ಯ, ಪಿ.ಜೆ. ರಾಜಶೇಖರ್, ಎ.ಎಂ. ಕೊಟ್ರೇಶ್‌, ಕೆ.ಎಂ. ಪರಮೇಶ್ವರಯ್ಯ, ಎಂ. ಬನ್ನಯ್ಯ, ಶಿವಕುಮಾರ್ ಡಿ.ಶೆಟ್ಟಿ, ದ್ರಾಕ್ಷಾಯಣಮ್ಮ, ರಾಜೇಶ್ವರಿ ವಸುಂಧರ ಇನ್ನಿತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!