ದಾವಣಗೆರೆ ಎಕ್ಸಪ್ರೆಸ್ ಆರ್. ವಿನಯ್‍ಕುಮಾರ್ – ರೀಚಾ ಸಿಂಗ್‍ ದಂಪತಿಗೆ ಹೆಣ್ಣು ಮಗು ಜನನ

ಸುದ್ದಿ 360 ಬೆಂಗಳೂರು, ಜೂ. 24: ದಾವಣಗೆರೆ ಎಕ್ಸಪ್ರೆಸ್, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆರ್. ವಿನಯ್ ಕುಮಾರ್ ತಂದೆಯಾಗಿದ್ದಾರೆ. ವಿನಯ್ ಕುಮಾರ್ ಪತ್ನಿ ರೀಚಾ ಸಿಂಗ್ ಗುರುವಾರ ಹೆಣ್ಣು  ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣ ವಿನಯ್ ಕುಮಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ.

ಪತ್ನಿ ರೀಚಾ ಸಿಂಗ್ ಹಾಗೂ ಮಗಳ ಜೊತೆ ಇರುವ ಚಿತ್ರವೊಂದನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಕಮೆಂಟ್ ಮಾಡಿ ವಿನಯ್-ರಿಚಾ ದಂಪತಿಗೆ ಶುಭಕೋರಿದ್ದಾರೆ.

“ಇಂದು ನಮಗೆ ಅತ್ಯಂತ ಸಂತೋಷದ ದಿನ ಮತ್ತು ನಮ್ಮ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಇದು ದೇವರು ನಮಗೆ ಕೊಟ್ಟಿರುವ ಅತ್ಯಂತ ಬೆಲೆಬಾಳುವ ಉಡುಗೊರೆ” ಎಂದು ವಿನಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ದಾವಣಗೆರೆ ಎಕ್ಸಪ್ರೆಸ್, ತಮ್ಮ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರವಾಗಿ ಒಂದು ಟೆಸ್ಟ್, 31 ಏಕದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

Leave a Comment

error: Content is protected !!