ದಾವಣಗೆರೆ: ಖೋಟಾ ನೋಟು ಜಾಲ ಪತ್ತೆ – ಇಬ್ಬರ ಬಂಧನ

ಸುದ್ದಿ360 ದಾವಣಗೆರೆ, ಆ. 10: ನಗರದಲ್ಲಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಜಿಲ್ಲಾ ಡಿಸಿಆರ್ ಬಿ ಪೊಲೀಸರು ಪೊಲೀಸರು ಬಂಧಿಸಿ, ಆರೋಪಿಗಳಿಂದ 1,20,700 ಮುಖಬೆಲೆಯ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಇಂದು (ಆ.10) ದಾವಣಗೆರೆಯ ಯಲ್ಲಮ್ಮನಗರ 4ನೇ ಮೇನ್ 6ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಸಿ ಆರ್ ಬಿ ಘಟಕದ ಪೊಲೀಸ್ ಅಧೀಕ್ಷಕರಾದ ಬಿ.ಎಸ್. ಬಸವರಾಜ್ ಹಾಗೂ ಡಿ.ಸಿ. ಆರ್. ಬಿ ಘಟಕದ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ಮಾಡಿ, ಖೋಟಾ ನೋಟು ಮುದ್ರಣ ಮತ್ತು ಚಲಾವಣೆಯ ಕಾನೂನು ಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ಎಸ್. ಅಶೋಕ ಹಾಗೂ ಅರಸನಾಳು ಹಾಲೇಶಿ ಎಂಬುವರನ್ನು ದಸ್ತಗಿರಿ ಮಾಡಿ ಇವರಿಂದ 500 ಮುಖಬೆಲೆಯ  183 ನೋಟುಗಳು, 100ರ 26 ನೋಟುಗಳು ಮತ್ತು 200ರ 133 ನೋಟುಗಳನ್ನು ಮತ್ತು ಒಂದು ಕಲರ್ ಜೆರಾಕ್ಸ್ ಮೆಷಿನ್ ಹಾಗೂ ಇದಕ್ಕೆ ಸಂಬಂಧಿಸಿದ ಇತರೆ ಸಾಮಾಗ್ರಿಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ದಾಳಿಯಲ್ಲಿ ಸಿಬ್ಬಂದಿಗಳಾದ ಕೆ.ಸಿ ಮಜೀದ್, ಕೆ.ಟಿ.ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್‌ನಾಯ್ಕ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್, ಪ್ರಶಾಂತ್ ಕುಮಾರ್ ಹಾಗೂ ನಿಂಗರಾಜ್ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಇವರು ಶ್ಲಾಘಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ, ಡಿಸಿಆರ್ ಬಿ ಡಿವೈಎಸ್ ಪಿ ಬಸವರಾಜ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!