ದಾವಣಗೆರೆ ಜಿಲ್ಲಾ ಕ ಸಾ ಪ ದಿಂದ ಸಮಸ್ತ ಶಿಕ್ಷಕ ಬಂಧುಗಳಿಗೆ ಹೃದಯಸ್ಪರ್ಶಿ  ಶುಭಾಶಯಗಳು

ಜಿಲ್ಲಾ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರು ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರೂ ಆದ ಬಿ. ವಾಮದೇವಪ್ಪ ಅವರು ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಶಿಕ್ಷಕ ಬಂಧುಗಳಿಗೆ ಹೃದಯಸ್ಪರ್ಶಿ ಶುಭಾಶಯ ಕೋರಿದ್ದಾರೆ.

ಅಕ್ಷರ ವಿದ್ಯೆ ಕಲಿಸಿದ, ಜೀವನ ಪಾಠ ಕಲಿಸಿದ ಗುರುಹಿರಿಯರನ್ನು ಗೌರವದಿಂದ ಸ್ಮರಿಸುವ ಪವಿತ್ರವಾದ ದಿನ.

II ಗುರು ಬ್ರಹ್ಮ  ಗುರು ವಿಷ್ಣು  ಗುರುದೇವೋ ಮಹೇಶ್ವರಃ II
II ಗುರು ಸಾಕ್ಷಾತ್ ಪರಬಹ್ಮ ತಸ್ಮೈಶ್ರೀ ಗುರುವೇ ನಮಃ II

ಅಜ್ಞಾನದಿಂದ ಸುಜ್ಞಾನದತ್ತ…
ಕತ್ತಲೆಯಿಂದ ಬೆಳಕಿನತ್ತ…
ಭಯದಿಂದ ನಿರ್ಭಯದತ್ತ… ಕರೆದೊಯ್ಯುವ ಅದ್ಭುತವಾದ ಶಕ್ತಿಯೇ “ಗುರು”.

ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಅತ್ಯಂತ ಶ್ರೇಷ್ಠವಾದ ಪರಮೋಚ್ಛ ಸ್ಥಾನ ಗುರುವಿಗಿದೆ. ಗುರುವಿನ ಗುಲಾಮನಾಗದೇ ಜೀವನದಲ್ಲಿ ಸಾಧನೆಯಿಲ್ಲ ಮತ್ತು ಸಾರ್ಥಕತೆಯಿಲ್ಲ. ಈ ರೀತಿಯಾಗಿ ಗುರುವಿನ ಮಹಿಮೆ ಅಪಾರವಾಗಿದೆ. ಬದುಕಿನಲ್ಲಿ ಅಕ್ಷರ ಜ್ಙಾನ, ಬದುಕುವ ಕಲೆ, ಜೀವನ ಪಾಠ ಹೇಳುವ ವ್ಯಕ್ತಿಯು ನಮ್ಮ ಬದುಕಿನಲ್ಲಿ ಗೌರವಯುತವಾದ ಗುರುವಿನ ಸ್ಥಾನವನ್ನಲಂಕರಿಸುತ್ತಾರೆ. ಮನೆಯೇ ಮೊದಲ ಪಾಠ ಶಾಲೆ – ತಾಯಿಯೇ ಮೊದಲ ಗುರು ಎಂಬಲ್ಲಿಂದ ಹಿಡಿದು ನಮ್ಮ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪ್ರತಿಯೊಬ್ಬರೂ ನಮಗೆ ಗುರುಗಳೇ…. ತಂದೆ.. ತಾಯಿ.. ಒಡ ಹುಟ್ಟಿದವರು.. ಬಂಧು-ಬಳಗ.. ಸ್ನೇಹಿತರು.. ಹಿತೈಷಿಗಳು… ಇತ್ಯಾದಿ ಇತ್ಯಾದಿ… ಅವರೆಲ್ಲರನ್ನು ಇವತ್ತಿನ ಪವಿತ್ರ ದಿನವಾದ “ಶಿಕ್ಷಕರ ದಿನಾಚರಣೆ”ಯಂದು ಕೃತಜ್ಞತೆಯಿಂದ ಸ್ಮರಿಸಿ ಗೌರವ ಸಲ್ಲಿಸಬೇಕಾದದ್ದು ನಮ್ಮೆಲ್ಲರ ಆದ್ಯ  ಕರ್ತವ್ಯ. “

ಹೊಸ ಸಮಾಜದ ನಿರ್ಮಾತೃಗಳು, ಆರೋಗ್ಯಪೂರ್ಣ ಸಮಾಜದ ಆಧಾರ ಸ್ಥಂಭಗಳು ಮತ್ತು ಸಮಾಜದಲ್ಲಿ ಅತ್ಯಂತ ಪೂಜನೀಯ ಸ್ಥಾನವನ್ನು ಅಲಂಕರಿಸಿರುವ ನಿಮಗಿದೋ ನನ್ನ ಗೌರವಪೂರ್ಣ ನಮನಗಳು ಮತ್ತು ಶಿಕ್ಷಕರ ದಿನಾಚರಣೆಯ ಗೌರವಪೂರ್ಣ ಹೃದಯಸ್ಪರ್ಶಿ  ಶುಭಾಶಯಗಳು….

– ಬಿ.ವಾಮದೇವಪ್ಪ
ಅಧ್ಯಕ್ಷರು, ಜಿಲ್ಲಾ ಕಸಾಪ, ದಾವಣಗೆರೆ.

admin

admin

Leave a Reply

Your email address will not be published. Required fields are marked *

error: Content is protected !!