ದಾವಣಗೆರೆ ಪೊಲೀಸರಿಂದ ನಾಲ್ಕು ಅಂತರ್ ಜಿಲ್ಲಾ ಕಳ್ಳರ ಬಂಧನ

ಸುದ್ದಿ360 ದಾವಣಗೆರೆ, ಸೆ.14: ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಆರೋಪಿಗಳಿಂದ 4,87,350 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ 6ನೇ ಕಲ್ಲು ಮತ್ತು ತುರ್ಚಗಟ್ಟ ಗ್ರಾಮದಲ್ಲಿ ರಾತ್ರಿ ಕನ್ನಕಳವು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಆ.28 ರಂದು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎಎಸ್‌ಪಿ ಕನಿಕಾ ಸಿಕ್ರಿವಾಲ್ ರವರು ಮಾಯಕೊಂಡ ವೃತ್ತ ನಿರೀಕ್ಷಕರಾದ ತಿಮ್ಮಣ್ಣ, ಎನ್ ರವರ ನೇತೃತ್ವದಲ್ಲಿ ಸಂಜೀವ್ ಕುಮಾರ್, ಪಿಎಸ್‌ಐ ಹದಡಿ ಹಾಗು ಹಾಗೂ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದೆ.

ಸದರಿ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ರಮೇಶ (47), ಮನು, ಮನೋಜ, ರೇಣುಕ /ರೇಣು, ಹಾಗೂ  ದಾವಣಗೆರೆ ಜಿಲ್ಲೆಯ ಪ್ರಮೊದ ಇವರುಗಳನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಒಂದು ಬಂಗಾರದ ಮಾಂಗಲ್ಯ ಸರ, ಎರಡು ಬಂಗಾರದ ಬಳೆ, ಒಂದು ಬಂಗಾರದ ನೆಕ್ಲಸ್, ಒಂದು ಹಸಿರು ಹರಳಿನ ಬಂಗಾರದ ಉಂಗುರ, ಒಂದು ಕೆಂಪು ಹರಳಿನ ಬಂಗಾರದ ಉಂಗುರ, ಒಂದು ಜೊತೆ ಬಂಗಾರದ ಬೆಂಡೋಲೆ, ಒಂದು ಜೊತೆ ಬೆಳ್ಳಿ ದೀಪ, ಒಂದು ನೀಲಾಂಜನೇಯ ದೀಪ, ಒಂದು ಜೊತೆ ಸಣ್ಣ ಬೆಳ್ಳಿ ಲೋಟ, ಒಂದು ಸಣ್ಣ ಬೆಳ್ಳಿ ತಟ್ಟೆ, 01 ಜೊತೆ ಬೆಳ್ಳಿ ಕುಂಕುಮ ಬಟ್ಟಲು, ಒಂದು ಸಣ್ಣ ಬೆಳ್ಳಿ ಚಮಚ, ಒಂದು ಲಿಂಗದ ಕರಡಿಗೆ, ಒಂದು ಸಣ್ಣ ಬೆಳ್ಳಿ ಚೆಂಬು, ಒಂದು ಬೆಳ್ಳಿ ಕಳಸದ ತಟ್ಟೆ, 02 ತುಂಬಿದ ಸಿಲೆಂಡರ್‌ಗಳು, ಕಂಪ್ಯೂಟರ್‌ ಮಾನೀಟರ್, ಹೋಂ ಥಿಯೇಟರ್ ಸೌಂಡ್ ಬಾಕ್ಸ್ ಹಾಗೂ ಕೃತ್ಯಕ್ಕೆ ಬಳಸಿದ ಕೆಎ-17 ಡಿ 6914 ನೇ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದು ಒಟ್ಟು 4,87,350/ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿತರನ್ನು ಪತ್ತೆ ಹಚ್ಚಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಾಯಕೊಂಡ ವೃತ್ತ ನಿರೀಕ್ಷಕರಾದ ತಿಮ್ಮಣ್ಣ.ಎನ್ ರವರು, ಸಂಜೀವ್‌ ಕುಮಾರ್ ಪಿಎಸ್‌ಐ, ಶಕುಂತಲಾ ಪಿ.ಎಸ್.ಐ, ಇಮ್ಮಿಯಾಚ್.ಪಿ.ಎಸ್.ಐ(ಪ್ರೊ), ಮಂಜುನಾಥ ಪಿ.ಎಸ್.ಐ ಸಿಬ್ಬಂದಿಗಳಾದ ಲೋಕ್ಯಾನಾಯ್ಕ, ಅಣ್ಣಯ್ಯ, ಕರಿಬಸಪ್ಪ, ಅರುಣಕುಮಾರ, ಸಿದ್ದೇಶ್‌, ರಾಘವೇಂದ್ರ, ಶಿವಕುಮಾರ.ಸಿ.ಎಂ, ಶ್ರೀನಿವಾಸ.ಕೆ ಚನ್ನಕೇಶವ.ಬಿ, ಸುನೀಲ್‌ ಕುಮಾರ, ಅರುಣಕುಮಾರ, ಇವರುಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್‌ ಐಪಿಎಸ್ ದಾವಣಗೆರೆ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ.ಬಸರಗಿ ರವರು ಶ್ಲಾಘಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!