ಸುದ್ದಿ360 ದಾವಣಗೆರೆ, ಆ.08: ನಗರದ ಕುರುಬರ ಪೇಟೆಯಲ್ಲಿರುವ ಶ್ರೀ ಅರಕೇರಮ್ಮ ದೇವಿ ದೇವಸ್ಥಾನದಲ್ಲಿ ಆ.12 ರಂದು ಶ್ರೀ ಅರಕೇರಮ್ಮದೇವಿ ದೇವಸ್ಥಾನ ಕಳಸಾರೋಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಆ. 11 ರ ಗುರುವಾರ, ರಾತ್ರಿ 7-00 ರಿಂದ ಪ್ರಾಯಶ್ಚಿತ ಹೋಮ, ಗಣಹೋಮ, ವಾಸ್ತುಶಾಂತಿ, ನವಗ್ರಹ ಪೂಜೆಗಳನ್ನು ನೆರವೇರಿಸಲಾಗುವುದು. ಆ. 12 ರ ಶುಕ್ರವಾರ, ಬೆಳಗ್ಗೆ 11-30 ರಿಂದ 12-30 ರವರೆಗೆ ಸಲ್ಲುವ ಅಂಜನ್ ಲಗ್ನದ ಶುಭ ಮುಹೂರ್ತದಲ್ಲಿ ಕಳಸಾರೋಣ ನೆರವೇರಿಸಲಾಗುವುದು. ಈ ಕಾರ್ಯಕ್ರಮದ ಸಾನಿಧ್ಯವನ್ನು ಹದಡಿ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಆಗಮಿಸಲಿದ್ದಾರೆ.
ಈ ವೇಳೆ ಅರಕೇರಮ್ಮ ದೇವಸ್ಥಾನ ಟ್ರಸ್ಟ್ (ರಿ.)ನ ಅಧ್ಯಕ್ಷ ಜಮ್ಮಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಹೆಚ್.ಬಿ. ಗೋಣೆಪ್ಪ, ಕುರುಬರ ಸಂಘದ ನಗರ ಕಾರ್ಯದರ್ಶಿ ಬಿ. ಷಣ್ಮುಖಪ್ಪ, ಮಾಜಿ ನಗರಸಭೆ ಅಧ್ಯಕ್ಷ ಎಂ. ಮಂಜುನಾಥ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ನಿವೃತ್ತ ಇಂಜಿನಿಯರ್ ಆನಂದಪ್ಪ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ದೂಡಾ ಅಭಿಯಂತರರಾದ ಶ್ರೀಮತಿ ರೇಣುಕಾ ಪ್ರಸಾದ, ಅಂತರಾಷ್ಟ್ರೀಯ ಕ್ರೀಡಾಪಟು ಬಿ. ರೇವಣ್ಣ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ಪಾಲಿಕೆ ಸದಸ್ಯರುಗಳಾದ ಜೆ.ಎನ್. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಕೆ.ಪ್ರಸನ್ನ ಕುಮಾರ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಜಿ.ಡಿ. ಪ್ರಕಾಶ್, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಆಶ್ರಯಸಮಿತಿ ಸದಸ್ಯ ಓ. ದುಗ್ಗಪ್ಪ, ಮಾಜಿ ನಗರಸಭಾ ಸದಸ್ಯ ಎಸ್. ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ.
ಆ. 19 ರ ಶುಕ್ರವಾರ, ಬೆಳಿಗ್ಗೆ 10-00 ಕ್ಕೆ ಶ್ರೀ ಅಮ್ಮನವರನ್ನು ಹೊಳೆಪೂಜೆಗೆ ಹರಿಹರಕ್ಕೆ ಕೊಂಡಯ್ಯಲಾಗವುದು. ನಂತರ ದಾವಣಗೆರೆಗೆ ಆಗಮಿಸಿ ಸಂಜೆ 5ಕ್ಕೆ ಅರುಣ ಚಿತ್ರಮಂದಿರ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದಲ್ಲಿ ಪತ್ರಿಸ್ಥಾಪನೆಗೊಳ್ಳುವುದು.
ಈ ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತು-ಮುತ್ತಲಿನ ಸಮಸ್ತ ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಅರಕೇರಮ್ಮ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.