ದಾವಣಗೆರೆ: ಹಿಂದೂ ಮಹಾಗಣಪತಿ – 5ನೇ ವರ್ಷದ ಗಣೇಶೋತ್ಸವಕ್ಕೆ ಹಂದರ ಕಂಬ ಪೂಜೆ

ಸುದ್ದಿ360 ದಾವಣಗೆರೆ, ಜು.29: ನಗರದ ಹಿಂದೂ ಮಹಾಗಣಪತಿ ಟ್ರಸ್ಟ್ ನಿಂದ 5ನೇ ವರ್ಷದ ಗಣಪತಿ ಹಬ್ಬದ ಆಚರಣೆಗೆ ಇಂದು ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಮಹಾಮಂಟಪದ ಹಂದರ ಕಂಬ ಪೂಜೆ ಸಲ್ಲಿಸಲಾಯಿತು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹಿಂದೂ ಮಹಾಗಣಪತಿ ಟ್ರಸ್ಟ್ ನ ಅಧ್ಯಕ್ಷ ಜೊಳ್ಳಿಗುರು ಸೇರಿದಂತೆ ಇತರೆ ಗಣ್ಯರು ಹಂದರ ಕಂಬಕ್ಕೆ ಹಾಲು ಬಿಟ್ಟು ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಗಣೇಶೋತ್ಸವ ಮಹಾಮಂಟಪಕ್ಕೆ  ಚಾಲನೆ ನೀಡಿದರು.

ಕೊಲ್ಕತ್ತಾ ಕಲಾವಿದರಿಂದ ಮಹಾಮಂಟಪ

ನಂತರ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಆಗಸ್ಟ್ 31ಕ್ಕೆ ನಡೆಯಲಿರುವ ಗಣೇಶ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಪೂಜೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದ ಕಲಾವಿದರು ಮಹಾಮಂಟಪ ನಿರ್ಮಿಸಲಿದ್ದು, ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ತರಳಬಾಳು ಮಂಟಪ ಹೋಲುವ ಮಹಾಮಂಟಪ ನಿರ್ಮಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಪೂಜಾಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿ ಮಾಡುವಂತೆ ಕೋರಿದರು.

24 ದಿನಗಳ ಗಣೇಶ ಮಹೋತ್ಸವ

ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್‌.ಶಿವಯೋಗಿ ಸ್ವಾಮಿ ಮಾತನಾಡಿ, ದಾವಣಗೆರೆಯಂತಹ ಮಹಾನಗರದಲ್ಲಿ ಕಳೆದ 5 ವರ್ಷಗಳಿಂದ ಸಾರ್ವಜನಿಕ ಗಣೇಶ ಮಹೋತ್ಸವ ಆಚರಿಸಲಾಗುತ್ತಿದೆ. ಸದಾ ಶಾಂತತೆಗೆ ಹಸರಾಗಿರುವ ದಾವಣಗೆರೆ ಜನತೆ 24 ದಿನಗಳ ಕಾಲ ನಡೆಯಲಿರುವ ಗಣೇಶ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಬೇಕು. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ವೇಳೆ ಪ್ರಭಾವಿ ರಾಜಕಾರಿಣಿಗಳು, ಮಠಾಧೀಶರು, ಗಣ್ಯರು ಆಗಮಿಸಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ಈ ಮಹೋತ್ಸವವನ್ನು ಇಡೀ ರಾಜ್ಯಕ್ಕೆ ಮಾದರಿ ಆಗುವಂತೆ ನಡೆಸಲಾಗುವುದು, ಸಾರ್ವಜನಿಕರು ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಳಿಸಿಕೊಡಬೇಕೆಂದು ಮನವಿ ಮಾಡಿದರು.

12 ಅಡಿ ಎತ್ತರದ ಶಿವಸ್ವರೂಪಿ ಗಣಪ

ಸಾರ್ವಜನಿಕ ಗಣೇಶ ಮಹೋತ್ಸವ ಹಿಂದೂ ಮಹಾಗಣಪತಿ ಟ್ರಸ್ಟ್ ನ ಅಧ್ಯಕ್ಷ ಜೊಳ್ಳಿ ಗುರು ಮಾತನಾಡಿ, 12 ಅಡಿ ಎತ್ತರದ ಶಿವ ಸ್ವರೂಪಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವಿಶಾಲವಾದ ವೇದಿಕೆ ಇರಲಿದ್ದು, 24 ದಿನಗಳ ಕಾಲವೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾ ಕಾರ್ಯಗಳು ನಡೆಯಲಿವೆ. ಇಲ್ಲಿ ಯಾವುದೇ ಜಾತಿ, ಮತ ಬೇಧವಿಲ್ಲದೇ ನಡೆಯುವ ರಾಜಕೀಯೇತರ ಕಾರ್ಯಕ್ರಮ ಇದಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಹಿಂದೂ ಮುಖಂಡ ಕೆ.ಬಿ.ಶಂಕರನಾರಾಯಣ್, ಬಿ.ಜಿ.ಅಜಯ್‌ ಕುಮಾರ್, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್ ಮಾತನಾಡಿ, ಗಣೇಶೋತ್ಸವದ ಆಶಯವನ್ನು ವ್ಯಕ್ತಪಡಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಪಿ.ಶ್ರೀನಿವಾಸ್, ಶ್ರೀನಿವಾಸ್ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ್, ಉಳುವಯ್ಯ, ಬಸಾಪುರ, ಗಣೇಶ್‌ ರಾವ್, ಕೆ.ಬಿ.ಗುರು, ತರಕಾರಿ ಶಿವು, ಶಂಕರ್ ಗೌಡ ಬಿರಾದರ್, ಶಾಸ್ತ್ರಿ ಮಂಜುನಾಥ್, ರಾಘವೇಂದ್ರ ಚೌಪ್ಯಾಕ್, ನವೀನ್, ದಿನೇಶ್ ಕೆ ಶೆಟ್ಟಿ, ಎ.ನಾಗರಾಜ್, ಸತೀಶ್ ಪೂಜಾರಿ, ಎನ್.ರಾಜಶೇಖರ್ ಸೇರಿದಂತೆ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!