ದೇಶ ಅಧೋಗತಿಗೆ ಬಂದಿರುವುದೇ ಕಾಂಗ್ರೆಸ್ಸಿನಿಂದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜು.08: ಕಾಂಗ್ರೆಸ್ ನವರು ಮಹಾತ್ಮಾಗಾಂಧಿ ಅವರ ಹೆಸರನ್ನು ಬಹಳಷ್ಟು ದುರುಪಯೋಗಪಡಿಸಿಕೊಂಡಿದ್ದಾರೆ. ಈ ದೇಶ ಅಧೋಗತಿಗೆ ಬಂದಿರುವುದೇ ಕಾಂಗ್ರೆಸ್ಸಿನಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರ ಕಾಲದಲ್ಲಿ ಪಿ.ಎಸ್.ಐ ಪ್ರಕರಣದಲ್ಲಿ ಡಿಐಜಿ ಒಬ್ಬರು ಭಾಗಿಯಾಗಿದ್ದರು. ಕಾಂಗ್ರೆಸ್ ಏನೂ ಮಾಡಲಿಲ್ಲ. ಎಫ್.ಐ.ಆರ್ ನಲ್ಲಿ  ಹೆಸರು ಬಂದರೂ ಕೂಡ ಅವರ ವಿಚಾರಣೆ, ಬಂಧನ, ಅಮಾನತು ಯಾವುದನ್ನೂ ಮಾಡಲಿಲ್ಲ. ಈಗ ನಾನು ಬಂದ ನಂತರ ಕಾನೂನು ಕ್ರಮ ಜರುಗಿಸಿದ್ದೇನೆ. ಇವರು ಜನರ ಬಳಿ ಕ್ಷಮೆಯಾಚಿಸಬೇಕು. ಅವತ್ತು ನಾವು ಇಂಥ ಕೆಲಸ ಮಾಡಲಿಲ್ಲ.  ಬಿಜೆಪಿ ಸರ್ಕಾರ ಅತ್ಯಂತ ಉನ್ನತ ಅಧಿಕಾರಿಗಳನ್ನು ಬಂಧಿಸಿದೆ ಎಂದು ಅವರಿಗೆ  ತಾವು ಮಾಡಿದ ತಪ್ಪಿನ ಅರಿವಾಗಬೇಕು. ಇದೊಂದು ಸರ್ಕಾರ ನ್ಯಾಯನಿಷ್ಠುರವಾಗಿ ಎಷ್ಟು ದೊಡ್ಡವರಿದ್ದರೂ ಶಿಕ್ಷೆಗೊಳಪಡಿಸುತ್ತಿದೆ ಎಂದರು.

ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿದೆ

ಅವರು ಪಕ್ಷಪಾತ, ಲಾಬಿಗಳಿಗೆ ಮಣಿದು ಅಪರಾಧಿಗಳನ್ನು ಹಾಗೂ ಪ್ರಕರಣಗಳನ್ನು ಮುಚ್ಚಿಹಾಕಿ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರು ಇದರಿಂದ ಪಾಠ ಕಲಿಯಬೇಕು. ಇನ್ನೊಬ್ಬರಿಗೆ ಪಾಠ ಹೇಳುವ ಅಧಿಕಾರ ಅವರಿಗಿಲ್ಲ. ಇದೊಂದೇ ಅಲ್ಲ,  ಕೆ.ಪಿ.ಎಸ್.ಇ ಯಲ್ಲಿ ಸರ್ಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆಯನ್ನು 61 ಜನರದ್ದು ಹೊರಗಿನಿಂದ ಬರೆಸಿದ್ದು ಎನ್ನುವುದು ನ್ಯಾಯಾಲಯದಲ್ಲಿ ನಿರೂಪಿತವಾಗಿ ನ್ಯಾಯಾಲಯ ಆದೇಶಿಸಿತು. ಒಬ್ಬರನ್ನೂ ಅವರು ಅಮಾನತು ಮಾಡಲಿಲ್ಲ.  ನಾನು ಗೃಹ ಸಚಿವನಾದ ನಂತರ ಅಮಾನತು ಮಾಡಿದೆ. ಅವರಿಂದ 18 ಕೋಟಿ ರೂ.ಗಳನ್ನು ವಸೂಲು ಮಾಡಿದ್ದರು.  ಇದು ಕಾಂಗ್ರೆಸ್ ವೈಖರಿ. ಈಗ  ನ್ಯಾಯಾಂಗ ತನಿಖೆ ಕೇಳುತ್ತಿದಾರೆ. ನಮ್ಮನ್ನು ಕೇಳುವವರು ಹಿಂದೆ ಅವರ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಏಕೆ ವಹಿಸಲಿಲ್ಲ.  ಅವರು ಯಾಕೆ ಮಾಡಲಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು.  ಅಥವಾ ಅಪರಾಧಿಗಳನ್ನು ಬಂಧಿಸಬಹುದಾಗಿತ್ತು. ಅವರು ಮಾಡದೇ ಇರುವುದನ್ನು ನಮಗೆ ಪ್ರಶ್ನಿಸುತ್ತಿದ್ದಾರೆ. ನ್ಯಾಯಾಂಗ ತನಿಖೆ ಮಾಡಿರುವ ಪ್ರಕರಣಗಳು ಹೊರಗೆ ಬಂದಿಲ್ಲ. ಈ ಪ್ರಕರಣದಲ್ಲಿ ಕೆಲವು  ಕಾಂಗ್ರೆಸ್ ನಾಯಕರಿರುವುದು ಗೊತ್ತಾಗಿ, ಪ್ರಕರಣದ ದಾರಿ ತಪ್ಪಿಸಲು ನ್ಯಾಯಾಂಗ ತನಿಖೆಯಾಗಬೇಕು ಎನ್ನುತ್ತಿದ್ದಾರೆ ಎಂದರು.

ಕೂಡಲೇ  20 ಜನ ಪೋಲಿಸ್ ಅಧಿಕಾರಿಗಳನ್ನು ಬಂಧಿಸಿರುವುದು ಸಿಐಡಿ ಇರುವುದರಿಂದ ಆಗಿದೆ. ನ್ಯಾಯಾಂಗ ತನಿಖೆಯಾದರೆ  ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈ ತನಿಖೆ ನ್ಯಾಯಾಲಯದಿಂದ ಮೇಲ್ವಿಚಾರಣೆಗೆ ಒಳಪಟ್ಟಿದೆ. ನ್ಯಾಯಲಯಕ್ಕೆ ಪ್ರಗತಿಯ ಬಗ್ಗೆ ವರದಿ ಸಲ್ಲಿಸಲಾಗುತ್ತಿದೆ. ನಮ್ಮ ಸರ್ಕಾರ ಸಂಪುರ್ನವಾಗಿ  ನಿಷ್‍ಪಕ್ಷಪಾತ ತನಿಖೆಯನ್ನು ನಿಷ್ಠುರವಾಗಿ, ಯಾವ ದಯೆ, ದಾಕ್ಷಿಣ್ಯವಿಲ್ಲದೆ, ಕ್ರಮ ಕೈಗೊಳ್ಳು ಮುಕ್ತವಾದ ಅಧಿಕಾರವನ್ನು ತನಿಕಾಧಿಕಾರಿಗಳಿಗೆ  ಕೊಟ್ಟಿದ್ದರಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಈಗಾಗಲೇ ಅವರ ಕಾಲದ ಹಗರಣಗಳು ಹೊರಗೆ ಬಂದಿವೆ, ಕಾಲಕಾಲಕ್ಕೆ ಇನ್ನಷ್ಟು ಹೊರಬರಲಿದೆ ಎಂದರು.

admin

admin

Leave a Reply

Your email address will not be published. Required fields are marked *

error: Content is protected !!