ದ್ರೋಣ ಎಜು ಇ ಲರ್ನಿಂಗ್ ನಿಂದ ವಿದ್ಯಾರ್ಥಿಗಳಿಗೆ ಇ-ತರಗತಿ

ಸುದ್ದಿ360 ದಾವಣಗೆರೆ, ಜು.12: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದ ಆಧುನಿಕ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸುವ ಆಶಯದಿಂದ ದ್ರೋಣ ಎಜುಕೇಷನ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ ಎಂದು ಜಾವ ಟೆಕ್ ಬಿಸಿನೆಸ್ ಸಲ್ಯೂಷನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಂಜೀವ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಶೈಕ್ಷಣಿಕ ಅಧ್ಯಯನಕ್ಕೆ ಪೂರಕ ಆಗಿರುವ ಪುಸ್ತಕಗಳು ಆನ್‌ ಲೈನ್‌ ಮೂಲಕವೇ ಸಿಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದೃಶ್ಯ ರೂಪದಲ್ಲಿ ಎಲ್ಲ ತರಗತಿ ಪಠ್ಯಗಳನ್ನು ಒಂದೆಡೆಯೇ ಲಭ್ಯ ಆಗುವಂತೆ ದ್ರೋಣ ಎಜು ಇ-ಲರ್ನಿಂಗ್ ಕಿಟ್ ಮೂಲಕ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಡಿಯೋ ಆನಿಮೇಷನ್ಸ್ ಹಾಗೂ ಸೆಮಿನಾರ್ ರೀತಿಯ ವಿಡಿಯೋಗಳು ಲಭ್ಯವಿದ್ದು, ಮಕ್ಕಳಿಗೆ ಎಲ್ಲ ವಿಷಯಗಳ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ ಸಿದ್ಧ ಪಡಿಸಲಾಗಿದೆ. ಮಕ್ಕಳ ಕಲಿಕಾ ಗುಣಮಟ್ಟ ವೃದ್ಧಿಯಾಗುವ ಜತೆಯಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ದ್ರೋಣ ಎಜು ಇ-ಲರ್ನಿಂಗ್ ಕಿಟ್‌ ಸಹಕಾರಿ ಆಗಲಿದೆ ಎಂದರು.

ದ್ರೋಣ ಇ-ಲರ್ನಿಂಗ್ ಅಪ್ಲಿಕೇಷನ್‌ನಲ್ಲಿ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ, ಸಮ್ಮರ್ ಕ್ಯಾಂಪ್‌ ತರಬೇತಿ ಸೌಲಭ್ಯ ಇರುತ್ತದೆ. ಪರೀಕ್ಷಾ ಸರಣಿ ಹಾಗೂ ಪಠ್ಯ ವಿಶ್ಲೇಷಣೆಯೊಂದಿಗೆ ಪ್ರತಿ ವಾರ 14 ಲೈವ್ ತರಗತಿ ಇರುತ್ತವೆ. ವಿದ್ಯಾರ್ಥಿಗಳು ಪಠ್ಯಗಳ ಪ್ರಶ್ನೆ ಇದ್ದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ. ಪ್ರತಿ ಅಧ್ಯಾಯದಲ್ಲಿ 2ಡಿ ಮತ್ತು 3ಡಿ ಅನಿಮೇಟೆಡ್ ವೀಡಿಯೊಗಳು ಇವೆ ಎಂದು ಹೇಳಿದರು.

ಸ್ವ-ಅಧ್ಯಯನಕ್ಕಾಗಿ ಪಠ್ಯ, ಟಿಪ್ಪಣಿಗಳು ಮತ್ತು ಪರಿಷ್ಕರಣೆಗಳು, ವಿಷಯ ಸ್ಪಷ್ಟತೆ, ನಿಯಮಿತ ಸಂದೇಹ ಪರಿಹಾರ ಅವಧಿ, ವಿಷಯ ಪರಿಣತಿ ಪಡೆದ ಅಧ್ಯಾಪಕರಿಂದ ಬೋಧನೆ, ಅಧ್ಯಯನ ವಸ್ತು, ಇ-ಪುಸ್ತಕ ಮತ್ತು ಪರಿಹರಿಸಿದ ಪ್ರಶೋತ್ತರಗಳು, ಸ್ಮಾರ್ಟ್ ಬೋರ್ಡ್ ವಿಡಿಯೋ, ರಸಪ್ರಶ್ನೆ ಇವೆಲ್ಲವೂ ದ್ರೋಣ ಇ-ಲರ್ನಿಂಗ್ ವಿಶೇಷತೆಗಳಾಗಿವೆ ಎಂದು ತಿಳಿಸಿದರು.

ವಲಯ ಮುಖ್ಯಸ್ಥ ವಿನಯ್‌ ಮಾತನಾಡಿ, ದ್ರೋಣ ಎಜು ಇ-ಲರ್ನಿಂಗ್ ಕಿಟ್ ನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮ ಹಾಗೂ ಸಿಬಿಎಸ್‌ಇ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಒಂದೇ ಅಪ್ಲಿಕೇಷನ್‌ನಲ್ಲಿ ಪಠ್ಯಕ್ರಮದ ಅನುಸಾರವಾಗಿ ತರಗತಿಗಳು, ಮಿನಿ ನೋಟ್ಸ್, ಡೀಟೇಲ್ಸ್, ನೋಟ್ಸ್, ಕ್ವಿಜ್, ಘಟಕ ಪರೀಕ್ಷೆ, ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳು ಸಿಗುತ್ತವೆ ಎಂದು ಹೇಳಿದರು.

ಸ್ಪೋಕನ್ ಇಂಗ್ಲೀಷ್, ಅಬಾಕಸ್, ಪಬ್ಲಿಕ್ ಸ್ಪೀಕಿಂಗ್ ಸ್ಕಿಲ್ಸ್ ಕೋರ್ಸ್‌ಗಳು ಸಹ ಲಭ್ಯವಿದೆ. ರೂ. 3000-00 ಪ್ರತಿ 2 ವರ್ಷಕ್ಕೆ ದ್ರೋಣ ಎಜು ಇ-ಲರ್ನಿಂಗ್ ಕಿಟ್ ಲಭ್ಯವಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ ಮಕ್ಕಳಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿಡಿಯೋ ಪಠ್ಯಗಳಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಟರಾಜ್, ಬಸವರಾಜ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!