ಸುದ್ದಿ360 ದಾವಣಗೆರೆ ಜ.5: ಮತದಾರರ ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗದಿಂದಲೇ ಉಚಿತವಾಗಿ ಮತದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಹೀಗಾಗಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಜೆರಾಕ್ಸ್ ಕೇಂದ್ರ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಎಪಿಕ್ ಕಾರ್ಡ್ಗಳನ್ನು ಪ್ರಿಂಟ್ ಪಡೆಯಬಾರದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜಿಲ್ಲೆಯ ಎಲ್ಲ ಏಳು ವಿಧಾನಸಭೆ ಕ್ಷೇತ್ರಗಳ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಸಿದ್ಧವಾಗಿದೆ. ಆದರೆ, ಈಗಲೂ ಹೊಸ ಮತದಾರರ ಹೆಸರು ಸೇರಿಸಲು ಅವಕಾಶವಿದೆ ಎಂದು ತಿಳಿಸಿದರು.
ಮತದಾರರ ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗದಿಂದಲೇ ಉಚಿತವಾಗಿ ಮತದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಹೀಗಾಗಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಜೆರಾಕ್ಸ್ ಕೇಂದ್ರ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಎಪಿಕ್ ಕಾರ್ಡ್ಗಳನ್ನು ಪ್ರಿಂಟ್ ಪಡೆಯಬಾರದು. ಜಿಲ್ಲೆಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಮುದ್ರಿಸಿ ಕೊಡುತ್ತಿದ್ದ ಎರಡು ಪ್ರಕರಣಗಳು ಪತ್ತೆಯಾಗಿವೆ. ಒಂದೊಮ್ಮೆ ಯಾರಾದರೂ ಪ್ರಿಂಟ್ ತೆಗೆದುಕೊಡುವುದಾಗಿ ಹೇಳಿದರೆ ಅಥವಾ ಎಲ್ಲಾದರೂ ಮತದಾರರ ಗುರುತಿನ ಚೀಟಿ ಮುದ್ರಿಸುವುದು ಕಂಡುಬಂದರೆ 08192-272953ಗೆ ಕರೆ ಮಾಡಿ ದೂರು ನೀಡಬೇಕು. ಮತದಾರರ ಪಟ್ಟಿ, ಐಡಿ ಕಾರ್ಡ್ಗೆ ಸಂಬಂಧಿಸಿದ ಯಾವುದೇ ಮಾಹಿತಿಗೆ 1950ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.