ನಕಲಿ ಬಂಗಾರದ ಬಿಲ್ಲೆ ನೀಡಿ 22 ಲಕ್ಷ ವಂಚನೆ: ಆರೋಪಿಯ ಬಂಧನ

ಸುದ್ದಿ360 ದಾವಣಗೆರೆ, ಆ.23: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಬಂಗಾರದ ಬಿಲ್ಲೆ ಜಾಲ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ 22 ಲಕ್ಷ ವಂಚನೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ದುರುಗಪ್ಪ (70) ಚನ್ನಗಿರಿ ನಗರದ ಎಸ್ ಬಿಆರ್ ಕಾಲೋನಿಯ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ ಪಿ ಎಸ್.‌ಸಂತೋಷ್, ಸಿಪಿಐ ಮಹೇಶ್, ಪಿಎಸ್ ಐ ಶಿವರುದ್ರಪ್ಪ‌ ಎಸ್.ಮೇಟಿ ಹಾಗೂ ಸಿಬ್ಬಂದಿಗಳಾದ ಎಂಟಿ ಸ್ವಾಮಿ, ಎಎಸ್ಐ ಮೈರಾಲಪ್ಪ, ಎಎಸ್ಐ ಓಂಕಾರಪ್ಪ, ಎಎಸ್ಐ ರುದ್ರೇಶ ಎಂ., ಸತೀಶ ಜಿ.ಆರ್., ಉಮೇಶ ವಿ.ಟಿ., ಆಂಜನೇಯ, ಕೊಟ್ರೇಶ್, ದೊಡ್ಡೇಶಿ ಮಂಜುನಾಥ, ಸಂತೋಷ, ರುದ್ರಸ್ವಾಮಿ, ಪ್ರವೀಣ್ ಗೌಡ, ಗಂಗಪ್ಪ, ಸೋಮಶೇಖರ ಇವರನ್ನೊಳಗೊಂಡ ತಂಡ ದಾಳಿ ಮಾಡಿದೆ.

ಈ ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ ಪಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್. ಬಿ ಬಸರಗಿರವರು ಶ್ಲಾಘಿಸಿದ್ದಾರೆ.

Leave a Comment

error: Content is protected !!