‘ನನ್ನ ಅಮ್ಮ ನಂಬರ್-1’ ಹೃದಯ ಮುಟ್ಟುವ ಟೈಟಲ್: ಲತೀಕಾ ದಿನೇಶ್ ಕೆ. ಶೆಟ್ಟಿ ಅವರ ಮನದ ಮಾತು

ಬೆಣ್ಣೆನಗರಿಯಲ್ಲಿ ಮನಮುಟ್ಟುವ  ವಿನೂತನ ರಿಯಾಲಿಟಿ ಶೋ

ಸುದ್ದಿ360, ದಾವಣಗೆರೆ, ಜು.10:  ದಾವಣಗೆರೆಯಲ್ಲಿ ಪ್ರಥಮ ಬಾರಿಗೆ  ನಗರದ ಕಲಾ ಕಲ್ಪ ಆರ್ಟ್ ಅಕಾಡೆಮಿ ಹಾಗೂ ವಿ ಯೂನಿಯನ್ ಇವೆಂಟ್ ವತಿಯಿಂದ “ನನ್ನ ಅಮ್ಮ ನಂಬರ್ 1” ಎಂಬ ಮನಮುಟ್ಟುವ ರಿಯಾಲಿಟಿ ಶೋ  ಕಾರ್ಯಕ್ರಮ ಭಾನುವಾರ ಆಯೋಜಿಸಲಾಗಿತ್ತು.

ನಗರದ ರಾಮ್ ಅಂಡ್ ಕೋ ಸರ್ಕಲ್ ಬಳಿ ಇರುವ ಸ್ವೆಟ್ ಪಾರ್ಕ್ ಜಿಮ್ ನಲ್ಲಿ ಆಯೋಜಿಸಲಾಗಿದ್ದ ಈ ವಿನೂತನ ಕಾರ್ಯಕ್ರಮವನ್ನು ನಗರದ ಪ್ರತಿಷ್ಟಿತ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು, ಮಾಜಿ ನಗರಸಭೆ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ ಮತ್ತು ಲತಿಕಾ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಿದರು.

ಉದ್ಘಾಟನೆ ನಂತರ ಮಾತನಾಡಿದ ಲತೀಕಾ ದಿನೇಶ್ ಕೆ. ಶೆಟ್ಟಿ, ಇದೊಂದು ಹೃದಯಕ್ಕೆ ಹತ್ತಿರವಾಗುವ ಟೈಟಲ್ ನಮ್ಮ ಮಕ್ಕಳಿಗೆ ನಾವು ನಂಬರ್ ಒನ್ ಹಾಗೂ ರೋಲ್ ಮಾಡೆಲ್  ಆಗಬೇಕು ಎಂದರು. ಇದೊಂದು ಒಳ್ಳೆಯ ಕಾಪ್ಟರ್ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದರೆ ಮಹಿಳೆಯರಿಗೆ ತುಂಬಾ ಉತ್ತೇಜನಕಾರಿಯಾಗಿರುತ್ತದೆ ಎಂದು ಹೇಳಿದರು.

ದಿನೇಶ್ ಕೆ ಶೆಟ್ಟಿ ಮಾತನಾಡಿ, ಇಂತಹ ರಿಯಾಲಿಟಿ ಶೋಗಳು ಹೆಚ್ಚಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅವಕಾಶ ಸಿಗುವಂತಾಗುತ್ತದೆ ಅಲ್ಲದೆ ಹೊಸ ಹೊಸ ಪ್ರತಿಭೆಗಳು ಹೊರ ಹೊಮ್ಮಲಿವೆ ಎಂದು ಹೇಳೀದರು. ಈ ಕಾರ್ಯಕ್ರಮ ಆಯೋಜಿಸಿದ ಆಯೋಜಕರಿಗೆ ಅಭಿನಂದನೆ ತಿಳಿಸಿದರು

ಈ ಸಂದರ್ಭದಲ್ಲಿ ಆಯೋಜಕರಾದ  ಹೇಮಾ ಶ್ರೀನಿವಾಸ್, ರೇಖಾ ನಾಗರಾಜ್, ಶಾರದಾ ಮಾಗನಳ್ಳಿ, ಭಾರತಿ ಪ್ರಸನ್ನ ಇನ್ನು ಮುಂತಾದವರಿದ್ದರು.

Leave a Comment

error: Content is protected !!