ಕಮಲ ತೊರೆದು ‘ಕೈ’ ಸಿದ್ಧಾಂತಕ್ಕೆ ಯಸ್ ಎಂದ ಸವದಿ
ಸುದ್ದಿ360 ಬೆಂಗಳೂರು ಏ.14: ಬಿಜೆಪಿಯಲ್ಲಿ ನನಗೆ ಅವಮಾನವಾಗಿದೆ ಎಂದು ಕೆಂಡದುಂಡೆಯಾಗಿರುವ ಸವದಿ ಇಂದು ಬಿಜೆಪಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ‘ಕೈ’ ಪಡೆಯನ್ನು ಸೇರಿದ್ದಾರೆ.
ಸವದಿ ಬೆಂಗಳೂರಿಗೆ ಬರುತ್ತಿದ್ದಂತೆ ಡಿಕೆಶಿಯೊಂದಿಗೆ ಎರಡು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆದಿದ್ದು, ಈ ವೇಳೆ ಮಾಜಿ ಸಿ.ಎಂ. ಸಿದ್ಧರಾಮಯ್ಯ, ರಣದೀಪ್ ಸುರ್ಜಿವಾಲ ಉಪಸ್ಥಿತರಿದ್ದರು.
ಬಿಜೆಪಿಯಿಂದ ಟಿಕೆಟ್ ದಕ್ಕದಿದ್ದರಿಂದ ಕಾಂಗ್ರೆಸ್ ಕಡೆ ಮುಖ ಮಾಡಿರುವ ಲಕ್ಷ್ಮಣ ಸವದಿ, ರಾಜ್ಯ ಕಾಂಗ್ರೆಸ್ ನಾಯಕರ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟಿರುವುದಾಗಿ ವರದಿಯಾಗಿದೆ.
ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಿಕೆ ಸೇರಿದಂತೆ ಐದು ಕ್ಷೇತ್ರಗಳ ಉಸ್ತುವಾರಿ ಹಾಗೂ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಸಚಿವ ಸ್ಥಾನ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ಕಾಂಗ್ರೆಸ್ ಸಿದ್ಧಾಂತಗಳಿಗೆ ಯಸ್ ಎಂದಿರುವ ಸವದಿಯ ಬೇಡಿಕೆಗಳಿಗೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ನಂತರ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸವದಿ ‘ನನ್ನ ಹೆಣ ಕೂಡ ಬಿಜೆಪಿ ಕಚೇರಿಯ ಮುಂದೆ ಹೋಗದಿರುವಂತೆ ಮನೆಯಲ್ಲಿ ಹೇಳುವುದಾಗಿ’ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.