‘ಪಠಾಣ್’ಚಿತ್ರದ ಪೋಸ್ಟರ್ ಹರಿದು ಹಾಕಿ ಚಿತ್ರ ಬ್ಯಾನ್ ಮಾಡಲು ಎಚ್ಚರಿಕೆ

ಸುದ್ದಿ360, ಧಾರವಾಡ ಜ.11: ಇಲ್ಲಿನ ಸಂಗಮ ಚಿತ್ರ ಮಂದಿರದಲ್ಲಿ ‘ಪಠಾಣ್’ಚಿತ್ರದ ಪೋಸ್ಟರ್ ಗಳನ್ನು  ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ ಘಟನೆ ಬುಧವಾರ ನಡೆದಿದೆ.

ಪಠಾಣ್ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದ್ದು, ಈಗಾಗಲೇ ದೇಶಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿಂದೆ ಪಠಾಣ್ ಚಿತ್ರದ ಬೇಶರಮ್ ಹಾಡಿಗೆ ನಟಿ ದೀಪಿಕಾ ಪಡಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ಡಾನ್ಸ್ ಮಾಡಿದ್ದನ್ನು ವಿರೋಧಿಸಿ, ಹಾಡು ಬಿಡುಗಡೆಯಾದಾಗಿನಿಂದ ಹಾಡಿನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುವ ದೃಶ್ಯಗಳು ಕಂಡು ಬಂದಿವೆ ಎಂದು ಶ್ರೀರಾಮ್ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲೀಕ್ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಧಾರವಾಡದ ಸಂಗಮ ಚಿತ್ರ ಮಂದಿರದಲ್ಲಿ ಪೋಸ್ಟರ್ ಹರಿದು ಹಾಕಿ, ಕೂಡಲೇ ಚಿತ್ರವನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಚಿತ್ರಮಂದಿರಗಳಿಗೆ ನುಗ್ಗಿ ಹೋರಾಟ ಮಾಡಬೇಕಾಗುತ್ತೆ ಎಂದು ಬ್ಯಾನರ್ ಅನ್ನು ತೆರವುಗೊಳಿಸಿ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಹತೀರ್ಥ ಕಟ್ಟಿ ಎಚ್ಚರಿಕೆ ನೀಡಿದ್ದಾರೆ.

Leave a Comment

error: Content is protected !!