ಪಿಯುಸಿ ಫಲಿತಾಂಶ: ದಾವಣಗೆರೆಗೆ 19ನೇ ಸ್ಥಾನ – ಕಾವ್ಯ ಎಂ.ಜಿ. ಜಿಲ್ಲೆಗೆ ಟಾಪರ್

ಸುದ್ದಿ360 ದಾವಣಗೆರೆ, ಜೂ.18: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎಂದಿನAತೆ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಕಡಿಮೆ ಫಲಿತಾಂಶ ಲಭ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.62.72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜಿಲ್ಲೆ ರಾಜ್ಯ ಮಟ್ಟದಲ್ಲಿ 19ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 19,725 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 11,568 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದ 6302ರಲ್ಲಿ 2473 ವಿದ್ಯಾರ್ಥಿಗಳು(ಶೇ.39.24) ತೇರ್ಗಡೆಯಾಗಿದ್ದು, ವಾಣಿಜ್ಯ ವಿಭಾಗದ 4874 ವಿದ್ಯಾರ್ಥಿಗಳಲ್ಲಿ 2805 (ಶೇ.57.55) ಹಾಗೂ ವಿಜ್ಞಾನ ವಿಭಾಗದ 8549 ವಿದ್ಯಾರ್ಥಿಗಳ ಪೈಕಿ 6290(ಶೇ.73.58) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪಿಯು ಉಪನಿರ್ದೇಶಕಿ ರಷ್ಮಿ ಮಾಹಿತಿ ನೀಡಿದ್ದಾರೆ.

2021ರಲ್ಲಿ ಕೊರೊನಾ ಕಾರಣದಿಂದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಕಾರಣ ಜಿಲ್ಲೆಗೆ ಶೇ.100 ಫಲಿತಾಂಶ ಲಭ್ಯವಾಗಿತ್ತು. ಅದಕ್ಕೂ ಮುನ್ನ 2020ರಲ್ಲಿ ಜಿಲ್ಲೆ ಶೇ.64.09 ಫಲಿತಾಂಶ ಪಡೆದು 19ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶ ಶೇ.2ರಷ್ಟು ಕಡಿಮೆಯಾಗಿದ್ದು, 19ನೇ ಸ್ಥಾನವನ್ನೇ ಕಾಯ್ದುಕೊಂಡಿದೆ.

ದಾವಣಗೆರೆಯ ವಿಶ್ವಚೇತನ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಿಲ್ಲೆಯ ಟಾಪರ್‍ ಎಂ.ಜಿ. ಕಾವ್ಯಾ 595 (ಶೇ.99.16), ದ್ವಿತೀಯ ಸ್ಥಾನ ಹಂಚಿಕೊAಡಿರುವ ಮುರಿಕಿ ಶ್ರೀ ಬಾರುಣಿ 593(ಶೇ.98.83), ಎ. ಭುವನ 593(ಶೇ.98.83) ಹಾಗೂ 591 (ಶೇ.98.5) ಅಂಕ ಗಳಿಸಿರುವ ನಿಶಾಂತ್‍ ಬಣಕಾರ್‍ ಮತ್ತು ವಿದ್ಯಾರ್ಥಿಗಳ ಪೋಷಕರು ಪರಸ್ಪರ ಸಿಹಿ ಹಂಚಿಕೊAಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿನೋದ್‍, ಕಾಲೇಜಿನ ಆಡಳಿತ ಮಂಡಳಿಯ ಪವನ್ ಕುಮಾರ್‍, ರಾಘವೇಂದ್ರ ಪ್ರಸಾದ್‍ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಶ್ವಚೇತನ ಕಾಲೇಜಿನ ಕಾವ್ಯ ಎಂ.ಜಿ. ಜಿಲ್ಲೆಗೆ ಟಾಪರ್

ನಗರದ ವಿಶ್ವಚೇತನ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ.ಜಿ. ಕಾವ್ಯಾ 595 (ಶೇ.99.16) ಅಂಕ ಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದು, ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದ್ದಾರೆ. ಅದೇ ಕಾಲೇಜಿನ ಮುರಿಕಿ ಶ್ರೀ ಬಾರುಣಿ 593(ಶೇ.98.83), ಎ. ಭುವನ 593(ಶೇ.98.83) ಮತ್ತು ಸಿದ್ಧಗಂಗಾ ಕಾಲೇಜಿನ ಎಲ್. ವಿನಾಯಕ 593(ಶೇ.98.83) ಜಂಟಿಯಾಗಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಮಾಗನೂರು ಬಸಪ್ಪ ಕಾಲೇಜಿನ ಜಿ.ಡಿ. ರಕ್ಷಿತಾ 592 (ಶೇ.98.66) ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸರ್‌ಎಂವಿ ಕಾಲೇಜಿನ ಜೀಯಾ ಎಂ. ಜೈನ್ ಜಿಲ್ಲೆಗೆ ಪ್ರಥಮ

ದಾವಣಗೆರೆ ಸರ್‌ಎಂವಿ ಕಾಲೇಜಿನ ಜೀಯಾ ಎಂ. ಜೈನ್ 589 (ಶೇ.98.16) ಅಂಕ ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ತೋಳಹುಣಸೆ ಬಾಪೂಜಿ ಎಸ್ಪಿಎಸ್ಎಸ್ ಕಾಲೇಜಿನ ಚೈತ್ರ 588 (ಶೇ.98), ದಾವಣಗೆರೆ ಆರ್.ಜಿ ಕಾಲೇಜಿನ ದಿಶಾ ಜೈನ್ 588 (ಶೇ.98) ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನವನ್ನು ಹಂಚಿಕೊAಡಿದ್ದರೆ, ಸರ್ ಎಂವಿ ಕಾಲೇಜಿನ ಎಂ.ಎಸ್. ಸೃಷ್ಟಿ 587 (ಶೇ.97.83) ಮತ್ತು ಜಿ. ಕಾರ್ತಿಕ 587 (ಶೇ.97.83) ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಬೆಳಗುತ್ತಿಯ ಶ್ರೀತೀರ್ಥಲಿಂಗೇಶ್ವರ ಕಾಲೇಜಿನ ಡಿ.ಆರ್. ಪ್ರಿಯಾಂಕಾ ಪ್ರಥಮ

ನ್ಯಾಮತಿ ತಾಲೂಕು ಬೆಳಗುತ್ತಿಯ ಶ್ರೀತೀರ್ಥಲಿಂಗೇಶ್ವರ ಕಾಲೇಜಿನ ಡಿ.ಆರ್. ಪ್ರಿಯಾಂಕಾ 585(ಶೇ.97.5) ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಜಗಳೂರು ತಾಲೂಕು ಕಮಂಡಲಗೊAದಿಯ ವಾಸುದೇವ ರೆಡ್ಡಿ ಕಾಲೇಜಿನ ಬಿ. ಲಕ್ಷ್ಮೀ 578 (ಶೇ.96.3)ದ್ವಿತೀಯ, ಜಗಳೂರು ನಾಲಂದ ಕಾಲೇಜಿನ ಜಿ.ಟಿ. ಭವಾನಿ 575 (ಶೇ.95.83)ಮತ್ತು ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜಿನ ಸಫೂರಾ ಬಾನು 575 (ಶೇ.95.83) ತೃತೀಯ ಸ್ಥಾನ ಗಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!